ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಕನಾ..? : ಹೆಚ್‌ಡಿಕೆಗೆ ಒಲಿಯುತ್ತಾ ವಿಪಕ್ಷ ನಾಯಕನ ಪಟ್ಟ..?

ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಕಾ ಎನ್ನಲಾಗ್ತಿದ್ದು, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಮಾಡುತ್ತಾರೆ ಎನ್ನಲಾಗ್ತಿದೆ.

First Published Jul 17, 2023, 10:56 AM IST | Last Updated Jul 17, 2023, 10:56 AM IST

ಬಿಜೆಪಿಯಲ್ಲಿ ವಿಪಕ್ಷ ನಾಯಕನ( Opposition leader) ಆಯ್ಕೆ ಗೊಂದಲ ಹಾಗೆ ಮುಂದುವರೆದಿದೆ. ಸರ್ಕಾರ ಬಂದು ಈಗಾಗಲೇ ಒಂದು ತಿಂಗಳು ಕಳೆಯುತ್ತಿದೆ. ಅಲ್ಲದೇ ವಿಧಾನಸಭಾ ಅಧಿವೇಶನ ಸಹ ಮುಗಿಯುತ್ತಿದೆ. ಆದ್ರೂ ಬಿಜೆಪಿ(BJP) ಇನ್ನೂ ಪ್ರತಿಪಕ್ಷ ನಾಯಕನ ಹೆಸರನ್ನು ಘೋಷಣೆ ಮಾಡಿಲ್ಲ. ಇದರಲ್ಲಿ ಏನಾದ್ರೂ ರಾಜಕೀಯ ತಂತ್ರಗಾರಿಕೆ ಅಡಗಿದೆಯಾ ಎಂಬ ಪ್ರಶ್ನೆ ಸಹ ಇದೀಗ ಮೂಡಿದೆ. ಒಂದು ವೇಳೆ ಬಿಜೆಪಿ ಜೆಡಿಎಸ್‌(JDS) ಜೊತೆ ಮೈತ್ರಿ ಮಾಡಿಕೊಂಡರೇ, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರಿಗೆ ವಿರೋಧ ಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯಾ ಎಂಬ ಚರ್ಚೆ ಸಹ ನಡೆಯುತ್ತಿದೆ. ಬಿಜೆಪಿಯ(BJP) ರಾಜ್ಯ ನಾಯಕರು ಇದಕ್ಕೆ ಒಪ್ಪುತ್ತಾರಾ ಎಂಬುದು ಇನ್ನೂ ತಿಳಿದಿಲ್ಲ. 

ಇದನ್ನೂ ವೀಕ್ಷಿಸಿ:  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಗರಣ: ಅಕ್ರಮದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೆ ತಪ್ಪಾ..?: