Asianet Suvarna News Asianet Suvarna News

ಶ್ರೀಲಂಕಾಗೆ ಹೋಗಿದ್ದು ನಿಜ, ಸ್ಫೋಟಕ ಮಾಹಿತಿ ಇದ್ರೆ ಜಮೀರ್ ಹೊರ ತರಲಿ: ಎಚ್‌ಡಿಕೆ

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ , ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. 'ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ಅದು ಅಪರಾಧ ಅಲ್ಲ. ನನ್ನ ಹೆಸರು ಬಳಸಿ ಜಮೀರ್ ಎಸ್ಕೇಪ್ ಆಗುವುದು ಏನಿದೆ? ಜಮೀರ್ ಬಳಿ ಸ್ಫೋಟಕ ಮಾಹಿತಿ ಇದ್ರೆ ನೀಡಲಿ. ಯಾಕೆ ನನ್ನ ಹೆಸರನ್ನು ಪದೇ ಪದೇ ಯಾಕಾಗಿ ಪ್ರಸ್ತಾಪಿಸುತ್ತಿದ್ದಾರೆ? ತನಿಖೆಗೂ ಅದಕ್ಕೂ ಏನು ಸಂಬಂಧವಿದೆ? ಎಂದು ಎಚ್ಡಿಕೆ ಹೇಳಿದ್ದಾರೆ. 
 

ಬೆಂಗಳೂರು (ಸೆ. 14): ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ , ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. 'ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ಅದು ಅಪರಾಧ ಅಲ್ಲ. ನನ್ನ ಹೆಸರು ಬಳಸಿ ಜಮೀರ್ ಎಸ್ಕೇಪ್ ಆಗುವುದು ಏನಿದೆ? ಜಮೀರ್ ಬಳಿ ಸ್ಫೋಟಕ ಮಾಹಿತಿ ಇದ್ರೆ ನೀಡಲಿ. ಯಾಕೆ ನನ್ನ ಹೆಸರನ್ನು ಪದೇ ಪದೇ ಯಾಕಾಗಿ ಪ್ರಸ್ತಾಪಿಸುತ್ತಿದ್ದಾರೆ? ತನಿಖೆಗೂ ಅದಕ್ಕೂ ಏನು ಸಂಬಂಧವಿದೆ? ಎಂದು ಎಚ್ಡಿಕೆ ಹೇಳಿದ್ದಾರೆ. 

ಗಣೇಶ ಹಬ್ಬ ಆಚರಿಸಿದ್ದೇ ಲಾಸ್ಟ್, ಬಳಿಕ ಶೇಖ್ ಫಾಜಿಲ್ ಭೂಗತ!

'ಈಗ ನಡೆಯುತ್ತಿರುವ ತನಿಖೆಗೂ, ನಾನು ಶ್ರೀಲಂಕಾಗೆ ಹೋಗಿದ್ದಕ್ಕೂ ಏನು ಸಂಬಂಧವಿದೆ? ಈಗ ಅದು ಅಪ್ರಸ್ತುತ. ಒಂದು ವೇಳೆ ಸಾಕ್ಷಿಗಳಿದ್ರೆ ಹೊರಗೆ ತರಲಿ. ತನಿಖೆಗೆ ಅವಕಾಶ ಮಾಡಿಕೊಡಲಿ' ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.