ಸದನದಲ್ಲಿ ಇಂದೇ ಪೆನ್‌ಡ್ರೈವ್‌ ಬಾಂಬ್‌ ಸಿಡಿಸ್ತಾರಾ ದಳಪತಿ ?: ನಿಜಕ್ಕೂ ಅದರಲ್ಲಿ ಸಾಕ್ಷಿ ಇದೆಯಾ ?

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಇಂದು ಸದನದಲ್ಲಿ ಪೆನ್‌ಡ್ರೈವ್‌ ಬಾಂಬ್‌ ಸಿಡಿಸುವ ಸಾಧ್ಯತೆ ಹೆಚ್ಚಿದೆ. ಇದು ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಎಂದು ಹೇಳಲಾಗುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಇಂದು ಸದನದಲ್ಲಿ ಪೆನ್‌ಡ್ರೈವ್‌ ಬಾಂಬ್‌(Pen Drive bomb) ಸಿಡಿಸುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಈ ಪೆನ್‌ಡ್ರೈವ್‌ ವಿಚಾರ ಸದನದಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ. ತಮ್ಮಲ್ಲಿರುವ ದಾಖಲೆ ಇಂದು ಬಿಡುಗಡೆ ಮಾಡ್ತೀನಿ ಎಂದು ಕುಮಾರಸ್ವಾಮಿ ಹೇಳಿದ್ದರು. ಪೆನ್‌ಡ್ರೈವ್‌ನಲ್ಲಿ ಯಾವ ದಾಖಲೆ ಇದೆ ಎಂದು ಜೆಡಿಎಸ್‌(JDS) ಶಾಸಕರಿಗೂ ತಿಳಿದಿಲ್ಲ. ಹೆಚ್‌ಡಿಕೆ ಹೇಳುವ ಪ್ರಕಾರ, ಇದರಲ್ಲಿ ಸಚಿವರ ಸಂಭಾಷಣೆ ಆಡಿಯೋ ಇದೆ ಎನ್ನಲಾಗ್ತಿದೆ. ಅಧಿಕಾರಿಗಳ ಟ್ರಾನ್ಸ್‌ಫರ್‌ಗೆ(Transfer Scam) ಸಂಬಂಧಿಸಿದ ಪೆನ್‌ಡ್ರೈವ್‌ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕುಮಾರಸ್ವಾಮಿ ರಾಜ್ಯದಲ್ಲಿ ಜಿಎಸ್‌ಟಿ ಜೊತೆ ವೈಎಸ್‌ಟಿ ಟ್ಯಾಕ್ಸ್‌ ಸಹ ಇದೆ ಎಂದು ಆರೋಪ ಮಾಡಿದ್ದರು.

ಇದನ್ನೂ ವೀಕ್ಷಿಸಿ:  ಎಮ್ಮೆ ಬೆನ್ನೇರಿದ RJD ಕಾರ್ಯಕರ್ತ ಕೇದಾರ್..!: ಇದರ ರಿಯಾಕ್ಷನ್ ನೋಡಿ ಎಲ್ಲ ಶಾಕೋ ಶಾಕು..!

Related Video