
ಡ್ರಗ್ಸ್ ಕೇಸ್: ಅನುಶ್ರೀ-ಮಾಜಿ ಸಿಎಂ ಕಾಲ್ ರಹಸ್ಯ, ಕುಮಾರಣ್ಣಗೆ ಸಿಟ್ಯಾಕೆ..? ಸಿಡುಕ್ಯಾಕೆ..?
ಮಾಜಿ ಸಿಎಂ ಹಾಗೂ ಅವರ ಪುತ್ರನೊಂದಿಗೆ ದೂರವಾಣಿ ಮೂಲಕ ಮಾತುಕತೆ ಮಾಡಿದ್ದಾರೆ ಎನ್ನುವುದು ಸಿಸಿಬಿ ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು, (ಅ.03): ಡ್ರಗ್ಸ್ ಕೇಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರು ಇದರಿಂದ ಪಾರಾಗಲು ಪ್ರಮುಖ ರಾಜಕೀಯ ನಾಯಕರಿಗೆ ಫೋನ್ ಕಾಲ್ ಮಾಡಿ ಮಾತನಾಡದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ
ಅದರಲ್ಲೂ ಮಾಜಿ ಸಿಎಂ ಹಾಗೂ ಅವರ ಪುತ್ರನೊಂದಿಗೆ ದೂರವಾಣಿ ಮೂಲಕ ಮಾತುಕತೆ ಮಾಡಿದ್ದಾರೆ ಎನ್ನುವುದು ಸಿಸಿಬಿ ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ.