Asianet Suvarna News Asianet Suvarna News

ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರು ಮಾಜಿ ಸಿಎಂಗೆ ಕಾಲ್‌ ಮಾಡಿರುವ ಬಗ್ಗೆ ಸಿಸಿಬಿ ಶಾಕ್ ಆಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಸಹ ಸಿಡಿದೆದ್ದಿದ್ದಾರೆ.

hd-kumaraswamy-reacts on Anchor anushree political link In Drugs Case rbj
Author
Bengaluru, First Published Oct 3, 2020, 3:33 PM IST
  • Facebook
  • Twitter
  • Whatsapp

ಬೆಂಗಳೂರು, (ಅ.03): ​ ನಿರೂಪಕಿ ಅನುಶ್ರೀ ಡ್ರಗ್ಸ್ ಪ್ರಕರಣದ ವಿಚಾರವಾಗಿ ಕೇಳಿಬರುತ್ತಿರುವ ಪ್ರಭಾವಿ ನಾಯಕರ ಹೆಸರಲ್ಲಿ ಯಾವ ಮಾಜಿ ಸಿಎಂ ಇದ್ದಾರೆ ಅಂತಾ ಜನರು ತಿಳಿದುಕೊಳ್ಳಬೇಕು ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.

"

ನಾನು ಸರ್ಕಾರಕ್ಕೆ, ಸಿಎಂಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಅನುಶ್ರೀ ಮೊಬೈಲ್‌ನಲ್ಲಿತ್ತು ಸ್ಫೋಟಕ ಸೀಕ್ರೆಟ್, ಪ್ರಭಾವಿ ರಾಜಕಾರಣಿಗಳಿಗೆ ಕಾಲ್

"

ಡ್ರಗ್ಸ್ ವಿಚಾರದಲ್ಲಿ ನಾನು ಮೊದಲೇ ಹೇಳಿದ್ದೆ. ಇದು ಹಳ್ಳ ಹಿಡಿಯುತ್ತೆ ಎಂದು ಹೇಳಿದ್ದೆ. ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿವೆ. ಕೆಲವು ಮಾಧ್ಯಮಗಳು ಅದರದ್ದೇ ಆದ ರೀತಿಯ ವರದಿಗಳನ್ನು ಮಾಡುತ್ತಿವೆ.  ​ಅನುಶ್ರೀ ವಿಚಾರದಲ್ಲಿ ಕೂಡಾ ಇಂಥದ್ದೇ ವರದಿಗಳು ಬರ್ತಿವೆ. ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ. ಆಕೆಯ ಕಾಲ್ ಲಿಸ್ಟ್​ನಲ್ಲಿ ಎರಡು ಬಾರಿ ಸಿಎಂ ಆಗಿದ್ದವರು ಎಂದೆಲ್ಲಾ ವರದಿಗಳು ಬರ್ತಿವೆ ಎಂಬುದನ್ನೂ  ಪ್ರಸ್ತಾಪಿಸಿದರು.

ನಾನು SM ಕೃಷ್ಣ, ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಸೇರಿ 6 ಜನ ಇದ್ದೇವೆ. ಯಾರು ಆ ಮಾಜಿ ಮುಖ್ಯಮಂತ್ರಿ ಎಂಬ ಹೆಸರನ್ನಾದರೂ ಹೇಳಬೇಕಲ್ಲ? ಯಾರು ಈ ವರದಿ ಕೊಟ್ಟಿದ್ದಾರೋ, ಆ ವರದಿಗಾರರ ಬಳಿ ನಾನು.. ಬೇರೆ ಮೂಲದಿಂದ ತಿಳಿದುಕೊಂಡೆ. ಆತನ ಬಳಿ ಯಾರೋ ಶಿವಪ್ರಕಾಶ್ ಎಂಬ ಅಧಿಕಾರಿ ಮಾತನಾಡಿರುವ ಸಾಧ್ಯತೆ ಇದೆ ಎಂದರು.

"

ನೊಟೀಸ್ ಬಂದ ದಿನ ಪ್ರಭಾವಿಗಳಿಗೆ ಅನುಶ್ರೀ ಕರೆ; ಮಾಜಿ ಸಿಎಂ, ಅವರ ಮಗನಿಗೆ ಢವಢವ ಶುರು!

ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಮಾಧ್ಯಮಗಳಿಗೆ ಮಾಹಿತಿ ಕೊಟ್ಟವರು ಯಾರು? ಜೊತೆಗೆ, ಮಾಜಿ ಸಿಎಂ ಮಗ ಎಂದೂ ವರದಿಗಳು ಬರ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios