Asianet Suvarna News Asianet Suvarna News

ಹಾಸನ ಜಿಲ್ಲೆಯಿಂದಲೇ ಅಖಾಡಕ್ಕಿಳಿಯುತ್ತಾರಾ ಮಾಜಿ ಪ್ರಧಾನಿ ದೇವೇಗೌಡರು..?

ಹಾಸನ ಲೋಕಸಭಾ ‌ಕ್ಷೇತ್ರದಿಂದ ಸ್ಪರ್ಧಿಸುವಂತೆ ದೇವೇಗೌಡರಿಗೆ ಒತ್ತಡ
ಚುನಾಯಿತ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ
ಡಿ.1ರಂದು ಹೊಳೆನರಸೀಪುರದ ಶ್ರೀರಾಮದೇವರ ಕಟ್ಟೆಯಲ್ಲಿ ಸಭೆ

ಹಾಸನ ಲೋಕಸಭಾ ‌ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರಿಗೆ(H.D.Devegowda) ಒತ್ತಡ ಕೇಳಿಬರುತ್ತಿದೆಯಂತೆ. ಪ್ರಜ್ವಲ್ ಬದಲು ದೇವೇಗೌಡರೇ ಸ್ಪರ್ಧಿಸುವಂತೆ ಒತ್ತಡ ಹೇರಲಾಗುತ್ತಿದೆಯಂತೆ.ಹಾಗಾಗಿ ಹಾಸನ(Hassan) ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲು ದೇವೇಗೌಡರು ಮುಂದಾಗಿದ್ದಾರೆ. ಚುನಾಯಿತ ಜನಪ್ರತಿನಿಧಿಗಳ ಜೊತೆ ಸಭೆ(Meeting) ನಡೆಸಿ ಅಭಿಪ್ರಾಯ ಸಂಗ್ರಹ ಮಾಡುವ ಸಾಧ್ಯತೆ ಇದೆ. ಹೀಗಾಗಿ ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿಯುತ್ತಾರಾ ಮಾಜಿ ಪ್ರಧಾನಿ ದೇವೇಗೌಡರು..? ಎಂಬ ಪ್ರಶ್ನೆ ಕಾಡತೊಡಗಿದೆ. ಡಿ.1ರಂದು ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಂಸದರು, ಶಾಸಕರು, ಜಿಪ-ತಾಪಂ ಮಾಜಿ ಸದಸ್ಯರ ಸಭೆಯನ್ನು ದೇವೇಗೌಡರು ಕರೆದಿದ್ದಾರೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಪಂ ಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದ್ದು, ದೇವೇಗೌಡರ ಅಧ್ಯಕ್ಷತೆಯಲ್ಲೇ ಸಭೆ ನಡೆಯಲಿದೆ. ಸಭೆಗೆ ಹಾಜರಾಗಿ ಪೂರಕ ಸಲಹೆ ಸೂಚನೆ ನೀಡುವಂತೆ ಸೂಚನೆ ನೀಡಲಾಗಿದೆ. ಬಿಜೆಪಿ(BJP)- ಜೆಡಿಎಸ್(JDS) ಚುನಾವಣಾ ಮೈತ್ರಿ ಆಗಿರುವ ಹಿನ್ನೆಲೆ ದೇವೇಗೌಡರು ಸ್ಪರ್ಧೆ ಮಾಡಿದ್ರೆ ಪಕ್ಷಾತೀತವಾಗಿ ಬೆಂಬಲ ಎಂಬ ಲೆಕ್ಕಾಚಾರವಿದೆ. ಮೈತ್ರಿಗೆ ಪ್ರೀತಂಗೌಡ, ಸಿಮೆಂಟ್ ಮಂಜು ವಿರೋಧ ಹಿನ್ನೆಲೆ ದೇವೇಗೌಡರೇ ಸ್ಪರ್ಧೆ ಮಾಡಿದ್ರೆ ಇಬ್ಬರೂ ವಿರೋಧ ಮಾಡದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಎಲ್ಲಾ ಬಿಜೆಪಿ ನಾಯಕರು ಬೆಂಬಲ ನೀಡುತ್ತಾರೆಂಬ ರಾಜಕೀಯ ಲೆಕ್ಕಾಚಾರ ಕೂಡ ಇದೆ. 

ಇದನ್ನೂ ವೀಕ್ಷಿಸಿ:  ತೆಲಂಗಾಣದಲ್ಲಿ ಕೊನೆಯ ಹಂತದ ಮತದಾನ: ರಾಜಸ್ಥಾನದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಅಧಿಕಾರನಾ ?