Asianet Suvarna News Asianet Suvarna News

ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲಿ? ಸಿದ್ದರಾಮಯ್ಯ

Oct 10, 2021, 4:15 PM IST

ಮಂಡ್ಯ, (ಅ.09): ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಮಾತನಾಡುವುದನ್ನು ನಾನು ನಿಲ್ಲಿಸಿದ್ದೇನೆ. ಆದರೂ ನನ್ನ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಾರಾ : ಪ್ರಧಾನಿ ಮೋದಿ ವಿಶ್‌ಗೂ ಸಮರ್ಥನೆ

ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ ಎಂಬ ಎಚ್.ಡಿ.ಕೆ.ಟ್ವೀಟ್ ಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಆದರೂ ಕುಮಾರಸ್ವಾಮಿಯೇ ಕಾಲು ಕೆದರಿಕೊಂಡು ಬರ್ತಿದ್ದಾರೆ ನಾನು ಏನು ಮಾಡಲಿ..? ಕುಮಾರಸ್ವಾಮಿಯವರ ಹೇಳಿಕೆಯನ್ನು ನಿರ್ಲಕ್ಷ ಮಾಡಿದ್ದೇನೆ. ಅವರು ಟೀಕೆ ಮಾಡಿದ್ರೆ ಮಾಡಲಿ ಎಂದರು.