ರಾಜ್ಯದಲ್ಲಿ ಮುಸ್ಲಿಂ ಸಮಾಜದ ಬಾಂಧವರಿಗೆ ಹೆಚ್ಚು ರಾಜಕೀಯ ಅಧಿಕಾರ ಕಲ್ಪಿಸಿರುವುದು ಜೆಡಿಎಸ್‌  ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ ಅಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ ವಾಗ್ದಾಳಿ

 ಕೆ.ಆರ್‌. ನಗರ (ಅ.09): ರಾಜ್ಯದಲ್ಲಿ ಮುಸ್ಲಿಂ (Muslim) ಸಮಾಜದ ಬಾಂಧವರಿಗೆ ಹೆಚ್ಚು ರಾಜಕೀಯ ಅಧಿಕಾರ ಕಲ್ಪಿಸಿರುವುದು ಜೆಡಿಎಸ್‌ (JDS) ಹೊರತು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ (Congress) ಅಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಹೇಳಿದರು.

ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದ ಬಳಿ 3.5 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ (Hostel) ಕಟ್ಟಡ ಪರಿಶೀಲಿಸಿ ನಂತರ ಅವರು ಮಾತನಾಡಿದರು.

ಹಾನಗಲ್‌ (Hanagal) ಮತ್ತು ಸಿಂದಗಿ (Sindagi) ಉಪ ಚುನಾವಣೆಯಲ್ಲಿ (By Election) ಜೆಡಿಎಸ್‌ನವರು ಬಿಜೆಪಿ (BJP) ಗೆಲ್ಲಲು ಅನುಕೂಲವಾಗುವಂತೆ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತೀಕ್ಷವಾಗಿ ಅವರು ಪ್ರತಿಕ್ರಿಯಿಸಿದರು.

ಮೈಸೂರು ನಗರಪಾಲಿಕೆ, ಜಿಪಂ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯರಾಜಕಾರಣದ ಪ್ರಮುಖ ಹುದ್ದೆಗಳನ್ನು ಮುಸ್ಲಿಂ ಸಮಾಜದವರಿಗೆ ನೀಡಿದ್ದು, ಯಾರು ಎಂದು ಪ್ರಶ್ನಿಸಿದ ಸಾ.ರಾ. ಮಹೇಶ್‌ ಮುಸ್ಲಿಂರಿಗೆ ಮೀಸಲಾತಿ ನೀಡಿದ್ದು, ಸಮಾಜದಲ್ಲಿ ಉನ್ನತ ಸ್ಥಾನ ಕಲ್ಪಿಸಿದ್ದೆ ಜೆಡಿಎಸ್‌ ಮತ್ತು ಮಾಜಿ ಪ್ರಧಾನಿಮಂತ್ರಿಗಳಾದ ಎಚ್‌.ಡಿ. ದೇವೇಗೌಡರೆಂದು (HD Devegowda) ಸಮರ್ಥನೆ ನೀಡಿದ್ದರು.

ಮೋದಿ ಉತ್ಸವದಲ್ಲಿ ಜೆಡಿಎಸ್‌ ಶಾಸಕ ಸಾರಾ ಭಾಗಿ : ಕುತೂಹಲ ಮೂಡಿಸಿದ ನಡೆ

ಕಾಂಗ್ರೆಸ್‌ ಮುಸ್ಲಿಂರಿಗೆ ಉನ್ನತ ಸ್ಥಾನ-ಮಾನ ನೀಡುವುದಿಲ್ಲ, ಜೆಡಿಎಸ್‌ ಆ ಕೆಲಸ ಮಾಡಿದ್ದರೆ ಸಹಿಸುವುದಿಲ್ಲ. ಇವರ ಈ ವರ್ತನೆಗೆ ಮತ್ತು ಹೊಟ್ಟೆಕಿಚ್ಚಿನ ರಾಜಕಾರಣಕ್ಕೆ ಯಾವ ಮದ್ದು ಇಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

ಎರಡು ದಿನಗಳ ಹಿಂದೆ ಮೈಸೂರಿನ ಕೃಷ್ಣರಾಜ ಕ್ಷೇತ್ರ ಮೋದಿ ಉತ್ಸವ್‌ನಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದರ ಜತೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ (PM Narendra Modi) ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿ ಪತ್ರ ಬರೆದಿದ್ದನ್ನು ಸಮರ್ಥಿಸಿಕೊಂಡ ಶಾಸಕರು, ನರೇಂದ್ರ ಮೋದಿಯವರು ಒಂದು ಪಕ್ಷಕ್ಕೆ ಪ್ರಧಾನಿಯಲ್ಲ ಇಡೀ ದೇಶಕ್ಕೆ ಪ್ರಧಾನಮಂತ್ರಿಗಳಾಗಿರುವ ಅವರಿಗೆ ಶುಭ ಕೋರಿದರೆ ತಪ್ಪೇನು? ಅಂದರು.

ನರೇಂದ್ರ ಮೋದಿ ಅವರು ಪ್ರತಿವರ್ಷ ನಮ್ಮ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಮಂತ್ರಿ ಎಚ್‌.ಡಿ. ದೇವೇಗೌಡರಿಗೆ ದೂರವಾಣಿ ಮೂಲಕ ಜನ್ಮದಿನದ ಶುಭಾಶಯ ಕೋರುತ್ತಾರೆ. ಜತೆಗೆ ಕಳೆದ ವರ್ಷ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಖುದ್ದು ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಇದು ವಿಶ್ವಾಸದ ಜೊತಕ್ಕವೆ ಹೊರತು ಇಂತಹ ವಿಚಾರಗಳಲ್ಲಿ ರಾಜಕೀಯ ಹುಡುಕುವುದು ಸಲ್ಲದು ಎಂದು ಪ್ರತಿಪಾದಿಸಿದರು.

ಪುರಸಭಾ ಸದಸ್ಯರಾದ ಕೆ.ಪಿ.ಪ್ರಭುಶಂಕರ್‌, ಸಂತೋಷ್‌ಗೌಡ, ತೋಂಟದಾರ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿಂದಿಯಾ, ತಾಪಂ ಇಒ ಎಚ್‌.ಕೆ. ಸತೀಶ್‌, ಪುರಸಭಾ ಮುಖ್ಯಾಧಿಕಾರಿ ಡಿ. ಪುಟ್ಟರಾಜು, ಕಂದಾಯ ಅಧಿಕಾರಿ ನಟರಾಜ್‌, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಅಶೋಕ್‌, ತಾಲೂಕು ನಿರ್ದೇಶಕ ಡಿ.ಸಿ. ಮಹೇಶ್‌, ಜೆಡಿಎಸ್‌ ಅಲ್ಪಸಂಖ್ಯಾತ ಜಿಲ್ಲಾ ಪ್ರಧಾನಕಾರ್ಯದರ್ಶಿ ಮುಬಾರಕ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಎಚ್‌.ಆರ್‌. ಮಧುಚಂದ್ರ, ಜೆಡಿಎಸ್‌ ಯುವ ಮುಖಂಡ ಎಚ್‌.ಎಸ್‌. ಜಗದೀಶ್‌ ಇದ್ದರು.