ಉತ್ತರ ಕರ್ನಾಟಕದಲ್ಲಿ JDS ಪಕ್ಷ 'ಪ್ರಜ್ವಲಿ'ಸಲು ದೇವೇಗೌಡ್ರ ಪ್ಲ್ಯಾನ್

ಉತ್ತರ ಕರ್ನಾಟಕ ಕಡೆ JDS ಪಕ್ಷ ಸಂಘಟನೆಗೆ ಪ್ರಜ್ವಲ್  ರೇವಣ್ಣನನ್ನು ಪ್ರಭಾವಿ ನಾಯಕನಾಗಿ ರೂಪಿಸಲು ದೇವೇಗೌಡ್ರು ಪ್ಲ್ಯಾನ್ ಮಾಡಿದ್ದಾರೆ. ದೇವೇಗೌಡರ ಸಲಹೆಯ ಮೇರೆಗೆ ಪ್ರಜ್ವಲ್  ಉತ್ತರ ಕರ್ನಾಟಕದ ಕಡೆ ಪ್ರವಾಸಕ್ಕೆ ರೆಡಿಯಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 28): ಉತ್ತರ ಕರ್ನಾಟಕ ಕಡೆ JDS ಪಕ್ಷ ಸಂಘಟನೆಗೆ ಪ್ರಜ್ವಲ್ ರೇವಣ್ಣನನ್ನು ಪ್ರಭಾವಿ ನಾಯಕನಾಗಿ ರೂಪಿಸಲು ದೇವೇಗೌಡ್ರು ಪ್ಲ್ಯಾನ್ ಮಾಡಿದ್ದಾರೆ. ದೇವೇಗೌಡರ ಸಲಹೆಯ ಮೇರೆಗೆ ಪ್ರಜ್ವಲ್ ಉತ್ತರ ಕರ್ನಾಟಕದ ಕಡೆ ಪ್ರವಾಸಕ್ಕೆ ರೆಡಿಯಾಗಿದ್ದಾರೆ. 

ಇಂದು FDA ಪರೀಕ್ಷೆ, ಅಕ್ರಮ ತಡೆಗೆ ಬಿಗಿ ಬಂದೋಬಸ್ತ್

ಪ್ರಜ್ವಲ್ ರೇವಣ್ಣ ಉತ್ತರ ಕರ್ನಾಟಕದ ಕಡೆ ಗಮನ ಹರಿಸಲಿ. ಪ್ರಜ್ವಲ್ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗುವುದು ಬೇಡ. ಈ ಹಿಂದೆ ಕೂಡಾ ಹುಣಸೂರು, ಆರ್ ಆರ್ ನಗರಗಳಲ್ಲಿ ಪ್ರಜ್ವಲ್ ಹಿಂದೆ ಕಾರ್ಯಕರ್ತರ ಪಡೆ ಇತ್ತು. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಸಮರ್ಥ ನಾಯಕನಾಗುವ ಸಾಮರ್ಥ್ಯ ಪ್ರಜ್ವಲ್ ಗಿದೆ. ಪಕ್ಷ ಸಂಘಟನೆ ಜೊತೆಗೆ ಉತ್ತರ ಕರ್ನಾಟಕದ ಕಡೆ ಪ್ರಬಲ ನಾಯಕನಾಗಿ ಬೆಳೆಯಲಿ. ಹೇಗೂ ಹಾಸನದ ಕಡೆ ಪಕ್ಷ ಸಂಘಟನೆ ನೋಡಿಕೊಳ್ಳಲು ರೇವಣ್ಣ ಇದಾರೆ. ಹಾಸನದ ಹೊರಗೂ ಪ್ರಜ್ವಲ್ ಬೆಳೆಯಲಿ‌ ಎಚ್ ಡಿ ರೇವಣ್ಣರಿಗೆ ದೇವೇಗೌಡ ಸಲಹೆ ನೀಡಿದ್ದಾರೆ. 

Related Video