ಅಬಕಾರಿ ಸಚಿವರಿಗೆ ಕೊಕ್ ಸಾಧ್ಯತೆ, ಎಚ್. ನಾಗೇಶ್ ಹೇಳೋದೇನು..?

ಇಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. 7 ಸಚಿವರಿಗೆ ಶಾಸಕ ಸ್ಥಾನ ಸಿಗಲಿದೆ ಎನ್ನಲಾಗಿದೆ. ಮುನಿರತ್ನ ಹಾಗೂ ಎಚ್ ನಾಗೇಶ್ ಭವಿಷ್ಯ ಅತಂತ್ರವಾಗಿದೆ. ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಕೈ ಬಿಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಎಚ್‌ ನಾಗೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

First Published Jan 13, 2021, 11:55 AM IST | Last Updated Jan 13, 2021, 11:55 AM IST

ಬೆಂಗಳೂರು (ಜ. 13): ಇಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. 7 ಸಚಿವರಿಗೆ ಶಾಸಕ ಸ್ಥಾನ ಸಿಗಲಿದೆ ಎನ್ನಲಾಗಿದೆ. ಮುನಿರತ್ನ ಹಾಗೂ ಎಚ್ ನಾಗೇಶ್ ಭವಿಷ್ಯ ಅತಂತ್ರವಾಗಿದೆ. ಅಬಕಾರಿ ಸಚಿವ ಎಚ್ ನಾಗೇಶ್‌ರನ್ನು ಕೈ ಬಿಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಎಚ್‌ ನಾಗೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ರಾಜಿನಾಮೆ ಕೊಡ್ರಿ, ಇಲ್ದಿದ್ರೆ... ಸಚಿವ ನಾಗೇಶ್‌ಗೆ ಸೂಚನೆ ಜೊತೆ ಎಚ್ಚರಿಕೆ

'ಸಿಎಂ ಜೊತೆ ನಾನು ಮಾತನಾಡಿದ್ದೇನೆ. ನನಗೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಕಷ್ಟಕಾಲದಲ್ಲಿ ನಾನು ಸಿಎಂ ಬೆನ್ನಿಗೆ ನಿಂತಿದ್ದೇನೆ. ನನ್ನನ್ನು ಸಚಿವ ಸ್ಥಾನದಿಂದ ತೆಗೆಯುವುದಿಲ್ಲ. ನನಗೆ ಸಿಎಂ ಮೇಲೆ ವಿಶ್ವಾಸವಿದೆ.  ಅವರು ನನ್ನ ಸಹಾಯವನ್ನು ಜನ್ಮ ಜನ್ಮಾಂತರದವರೆಗೆ ಮರೆಯಬಾರದು' ಎಂದಿದ್ದಾರೆ.