"ಅಣ್ಣ ಮಾತಾಡೋದನ್ನ ತಮ್ಮ ಕೇಳ್ತಾನೆ.." ಎಚ್‌ಡಿಕೆಗೆ ಟಕ್ಕರ್‌ ಕೊಟ್ಟ ಡಿ.ಕೆ.ಶಿವಕುಮಾರ್‌

ಫಾರಿನ್‌ನಿಂದ ಕುಮಾರಣ್ಣ ಲ್ಯಾಂಡ್..“ಕ್ಷಿಪಣಿ” ಲಾಂಚ್..!
“250” ಕೋಟಿಯ ಬಾಂಬ್ ಸಿಡಿಸಿದ ಹೆಚ್‌.ಡಿ.ಕುಮಾರಸ್ವಾಮಿ..!
ಜ್ಯೋತಿಷ್ಯ.. ಕುತಂತ್ರ..ಮಾಟ.. ಮಾಯೆ..ಏನಿದು ಹೊಸ ಕಥೆ..?

First Published Aug 5, 2023, 1:06 PM IST | Last Updated Aug 5, 2023, 1:06 PM IST

ಹೊರಗಿನ ಪ್ರಪಂಚಕ್ಕೆ ಕಾಣದ ನಿಗೂಢ ರಹಸ್ಯ ಕಾಂಗ್ರೆಸ್ ಸರ್ಕಾರದ(congress government) ಒಡಲಲ್ಲಿ ಅಡಗಿ ಕೂತಿದ್ಯಂತೆ ಆ ಸ್ಫೋಟಕ ಸಿಕ್ರೇಟ್‌. ಫಾರಿನ್ ಟೂರ್ ಮುಗಿಸಿ ಬಂದ ಕುಮಾರಣ್ಣ 250 ಕೋಟಿಯ ಬಾಂಬ್ ಸಿಡಿಸಿದ್ದಾರೆ. ಕಳೆದ 15 ದಿನಗಳಿಂದ ಯುರೋಪ್ ಪ್ರವಾಸದಲ್ಲಿ(Europe tour) ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ( H.D. Kumaraswamy) ಫಾರಿನ್ ಟೂರ್ ಮುಗಿಸಿ ವಾಪಸ್ ಬಂದಿದ್ದಾರೆ. ಬಂದವರೇ ಕೈ ಸರ್ಕಾರದ ವಿರುದ್ಧ ಕ್ಷಿಪಣಿ ಉಡಾಯಿಸಿ ಬಿಟ್ಟಿದ್ದಾರೆ. ಫಾರಿನ್‌ನಿಂದ ನೇರವಾಗಿ ಬೆಂಗಳೂರಿನ(Bengaluru) ಕೆಂಪೇಗೌಡ ಇಂಟರ್'ನ್ಯಾಷನಲ್ ಏರ್'ಪೋರ್ಟ್'ನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿಸಿರೋ ಬಾಂಬ್ ಇದು. ಇದು ಅಂತಿಂಥಾ ಬಾಂಬ್ ಅಲ್ಲ. 250 ಕೋಟಿಯ ಬಾಂಬ್. ದೆಹಲಿಗೆ ಕಳುಹಿಸೋದಕ್ಕೆ 250 ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡ್ಬೇಕು ಅಂತ ಬಿಡಿಎ ಅಧಿಕಾರಿಗಳಿಗೆ ಆರ್ಡರ್ ಆಗಿದ್ಯಂತೆ. ಹೀಗಂತ ಸಿದ್ದು ಸರ್ಕಾರದ ಮೇಲೆ ನೇರ ಆರೋಪ ಮಾಡಿದ್ದಾರೆ ದಳಪತಿ.

ಇದನ್ನೂ ವೀಕ್ಷಿಸಿ:  ಕೊಳೆತ ಆಹಾರವನ್ನೇ ವಾರ್ಡನ್‌ಗೆ ತಿನ್ನಿಸಿ, ಚೆನ್ನಾಗಿ ಹೊಡೆಯಿರಿ: ಶಾಸಕ ವೀರೇಂದ್ರ ಪಪ್ಪಿ

Video Top Stories