Devegowda: ಲೋಕಸಭಾ ಚುನಾವಣೆ ವೇಳೆ ಗೌಡರ ಕಣ್ಣೀರು ಅಸ್ತ್ರ! 'ನಾನು ಇನ್ನೇರಡು ವರ್ಷ ಬದುಕಬಹುದು ಅಷ್ಟೇ'

ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹೇಳಿದ್ದಾರೆ.
 

Share this Video

ಮಾಜಿ ಪ್ರಧಾನಿ ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು, ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌ ಪಕ್ಷ ಎಂದು ಹೆಚ್‌ಡಿಡಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಐಎನ್‌ಡಿಐಎ ಕೂಟದಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಎಂದು ದೇವೇಗೌಡರು(H.D.Devegowda) ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ. ಲೋಕಸಭಾ ಚುನಾವಣಾ ವೇಳೆ ದೇವೇಗೌಡರು ಕಣ್ಣೀರ ಅಸ್ತ್ರ ಪ್ರಯೋಗಿಸಿದ್ದಾರೆ. ಪ್ರಧಾನಿ ಮೋದಿ(Narendra Modi) ಕೈ ಹಿಡಿದು ಬರೆಸುವ ಶಕ್ತಿ ನನಗಿದೆ. ಜನರಿಗೆ ಏನಾದರೂ ಮಾಡಿ ಕೊನೆಯುಸಿರು ಎಳೆಯಬೇಕೆಂಬ ಹಠ ಇದೆ. ನಾನು ಯಾವಾಗಲೋ ಸಾಯಬೇಕಿತ್ತು, ಆದ್ರೆ ಬದುಕಿದೆ. ನನಗೆ ಕಿಡ್ನಿ ಫೇಲ್‌ ಆಗಿದ್ದಾಗ ಡಾ.ಮಂಜುನಾಥ್‌ ನನ್ನನ್ನು ಬದುಕಿಸಿದ್ರು ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Narendra Modi: ಕರುನಾಡಲ್ಲಿ ಎರಡನೇ ಹಂತದ ಮೋದಿ ಕ್ಯಾಂಪೇನ್ ಕಿಕ್: ಎರಡು ದಿನ,12 ಕ್ಷೇತ್ರ..ಆರು ಕಡೆ ಬೃಹತ್ ಸಮಾವೇಶ!

Related Video