ಜೆಡಿಎಸ್‌ಗೆ ಮತ್ತೊಂದು ಶಾಕ್: ತೆನೆ ಇಳಿಸಿ ‘ಕೈ’ ಹಿಡೀತಾರಾ ಬಲಿಷ್ಠ ನಾಯಕ...?
ಮಂಡ್ಯದ ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಬಳಿಕ ಜೆಡಿಎಸ್‌ಗೆ(JDS) ಮತ್ತೊಂದು ಶಾಕ್ ನೀಡಲಾಗಿದೆ. ಜೆಡಿಎಸ್‌ನ ಬಲಿಷ್ಠ ನಾಯಕ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜುಗೆ(C.S.Puttaraju) ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗ್ತಿದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ(Minister Chaluvarayaswamy) ಸುಳಿವು ಕೊಟ್ಟಿದ್ದಾರೆ. ಮಂಡ್ಯದ (Mandya)ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್‌ಗೆ (Congress) ಬರ್ತಾರೆ. ಯಾರು ಅನ್ನೋದನ್ನ ಮುಂದೆ ಹೇಳ್ತೀವಿ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಸಿ.ಎಸ್. ಪುಟ್ಟರಾಜುಗೆ ಎಂಪಿ ಟಿಕೆಟ್ ಭರವಸೆ ನೀಡಿ ಕಾಂಗ್ರೆಸ್‌ಗೆ ಸೆಳೆಯಲು ಪ್ಲಾನ್ ಮಾಡಲಾಗಿದೆ ಎನ್ನಲಾಗ್ತಿದೆ. ಸದ್ಯ ಜೆಡಿಎಸ್‌ನಿಂದ ಸಿಎಸ್ ಪುಟ್ಟರಾಜು ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ JDS ನಡೆಸಿದ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿಗೂ ಗೈರಾಗಿದ್ದರು. ಲೋಕಸಭೆಗೆ ಪುಟ್ಟರಾಜು ಅಭ್ಯರ್ಥಿ ಮಾಡಿ ಮಂಡ್ಯ ಗೆಲ್ಲಲು ‘ಕೈ’ ಪ್ಲಾನ್ ಮಾಡಿದೆ. ಸೋಲಿನ ಬಳಿಕ JDS ಕಾರ್ಯಕ್ರಮಗಳಲ್ಲಿ ಪುಟ್ಟರಾಜು ಕಾಣಿಸಿಕೊಳ್ಳುತ್ತಿಲ್ಲ. HDK, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಜತೆ ಭಿನ್ನಮತವಿದ್ದು, ಇದನ್ನೇ ಕಾಂಗ್ರೆಸ್ ದಾಳವಾಗಿಸಿಕೊಂಡಿದೆ.
ಇದನ್ನೂ ವೀಕ್ಷಿಸಿ: ದಶಕದ ಹೋರಾಟ..ರೈತನಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ..!