ರಾಜ್ಯ ಬಿಜೆಪಿ-ಕಾಂಗ್ರೆಸ್‌ನಲ್ಲಿ ಗುಜರಾತ್‌ ಮಾಡೆಲ್‌ ಜಪ!

ಗುಜರಾತ್‌ನಲ್ಲಿ ಬಿಜೆಪಿ ಸಾಧಿಸಿರುವ ಐತಿಹಾಸಿಕ ಗೆಲುವು, ರಾಜ್ಯ ರಾಜಕೀಯದಲ್ಲೂ ಬದಲಾವಣೆಗೆ ಕಾರಣವಾಗಲಿದೆ. ಬಿಜೆಪಿ ಪಕ್ಷ ಮಾತ್ರವಲ್ಲ, ಈಗ ಕಾಂಗ್ರೆಸ್‌ ಪಕ್ಷ ಕೂಡ ಗುಜರಾತ್‌ ಮಾಡೆಲ್ ಬಗ್ಗೆ ಕುತೂಹಲದ ಕಣ್ಣಲ್ಲಿ ನೋಡುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.9): ರಾಜ್ಯ ರಾಜಕೀಯದಲ್ಲಿ ಈವರೆಗೂ ಅಭಿವೃದ್ಧಿ ವಿಚಾರದಲ್ಲಿ ಮಾತ್ರವೇ ಗುಜರಾತ್‌ ಮಾಡೆಲ್‌ ಚರ್ಚೆಯಾಗುತ್ತಿತ್ತು. ಈ ಬಾರಿ ರಾಜಕೀಯದ ವಿಚಾರದಲ್ಲೂ ಗುಜರಾತ್‌ ಮಾಡೆಲ್‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್‌ ಕೂಡ ಗುಜರಾತ್‌ ಮಾಡೆಲ್‌ ಬಗ್ಗೆ ಚರ್ಚೆ ಮಾಡುತ್ತಿದೆ. 

ಗುಜರಾತ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವ ಬಿಜೆಪಿ ಈಗ ಕರ್ನಾಟಕದತ್ತ ಮುಖ ಮಾಡಿದೆ. ಇದರ ನಡುವೆ ಕರ್ನಾಟಕದಲ್ಲಿ ಈಗಿರುವ ಸಾಕಷ್ಟು ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿ ಹೋಗಬಹುದು ಎನ್ನುವ ಅನುಮಾನ ಕಾಡಿದೆ. ಒಟ್ಟಾರೆ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಂತೂ ಗುಜರಾತ್‌ ಫಲಿತಾಂಶ ನೀಡಿದೆ.

ಕರ್ನಾಟಕಕ್ಕೂ ಅನ್ವಯವಾಗುತ್ತಾ ಗುಜರಾತ್ ವಿಜಯ ಮಂತ್ರ?

ಈ ಕುರಿತಾಗಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ನಮ್ಮಲ್ಲಿ ಅಭ್ಯರ್ಥಿ ಆಯ್ಕೆಯಲ್ಲೂ ಬದಲಾವಣೆ ಆಗಬೇಕಿದೆ. ಹಲವು ಬಾರಿ ಗೆದ್ದವರಿಗೆ ಟಿಕೆಟ್ ಹಂಚಿಕೆ ಬಗ್ಗೆ ಮರುಚಿಂತನೆ ಆಗಬೇಕಿದೆ. ಹಿರಿಯರನ್ನ ಪರಿಷತ್‌ಗೆ ಕಳಿಸಿ, ಯುವಕರಿಗೆ ಅವಕಾಶ ನೀಡಲಿ. ಹೊಸಬರಿಗೆ ಅವಕಾಶ ಕೊಡುವುದು ಕರ್ನಾಟಕಕ್ಕೂ ಮಾದರಿಯಾಗಲಿ. ಹಿರಿಯ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ಮರುಚಿಂತನೆ ಆಗಲಿ ಎಂದು ಹೇಳಿದ್ದಾರೆ.

Related Video