Asianet Suvarna News Asianet Suvarna News

ಕರ್ನಾಟಕಕ್ಕೂ ಅನ್ವಯವಾಗುತ್ತಾ ಗುಜರಾತ್ ವಿಜಯ ಮಂತ್ರ?

ಗುಜರಾತ್‌ನಲ್ಲಿ ಬಿಜೆಪಿ ಸಾಧಿಸಿರುವ ವಿಜಯ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸಾಧಿಸಿದ ವಿಜಯ, ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ, ರಾಜ್ಯದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲೂ ತಲ್ಲಣ ಸೃಷ್ಟಿಸಿದೆ. ಮೋದಿ ಹಾಗೂ ಯೋಗಿ ನಾಡಲ್ಲಿ ಕೈಹಿಡಿದ ಟಿಕೆಟ್‌ ಸೂತ್ರ ರಾಜ್ಯದಲ್ಲೂ ಜಾರಿಯಾಗಬಹುದಾ ಎನ್ನುವ ಅಚ್ಚರಿಯಲ್ಲಿ ನಾಯಕರಿದ್ದಾರೆ.

ಬೆಂಗಳೂರು (ಡಿ.9): ಗುಜರಾತಲ್ಲಿ ಮೋದಿ ಸುನಾಮಿಗೆ ಕರ್ನಾಟಕದ ಕೇಸರಿ ಕೋಟೆಯಲ್ಲಿ ಮಹಾ ತಲ್ಲಣಗೊಂಡಿದೆ. ಇನ್ನೊಂದೆಡೆ ಹಿಮಾಚಲದಲ್ಲಿ ಕಾಂಗ್ರೆಸ್ ಕಮಾಲ್  ಮಾಡಿದ್ದು, ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ.  ಉತ್ತರ, ಪಶ್ಚಿಮದಲ್ಲಿ ಬೀಸಿದ ಸುನಾಮಿಗೆ ಕರ್ನಾಟಕದ ಕೈ-ಕೇಸರಿ ಕಲಿಗಳು ಬೆಚ್ಚಿ ಬಿದ್ದಿದ್ದಾರೆ. ಬಿಜೆಪಿ, ಕಾಂಗ್ರೆಸ್‌ಗೆ ಗುಜರಾತ್, ಹಿಮಾಚಲದ ಫಲಿತಾಂಶ ಕಲಿಸಿದ ಪಾಠಗಳು ಹಾಗಿವೆ. ಯೋಗಿಗಳ ನಾಡು ಮೋದಿ ನಾಡಲ್ಲಿ ಕೈ ಹಿಡಿದ ಬಿಜೆಪಿ ಟಿಕೆಟ್ ಸೂತ್ರ, ಕರ್ನಾಟಕದಲ್ಲೂ ಜಾರಿಯಾಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಗುಜರಾತ್'ನಲ್ಲಿ ಎದ್ದ ಮೋದಿ ಅಲೆಯಿಂದ ಕರ್ನಾಟಕವನ್ನು ಗೆಲ್ಲುತ್ತೇವೆ ಅಂತ ಹೊರಟಿರೋ ಕೇಸರಿ ಕಲಿಗಳಿಗೆ ಹಿಮಾಚಲ ಪ್ರದೇಶ ಫಲಿತಾಂಶ ಕಲಿಸಿದ ಪಾಠ ಎಂಥದ್ದು ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು.  ಗುಜರಾತ್'ನಲ್ಲಿ 38 ಮಂದಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದೇ ವಿಚಾರ ಈಗ ರಾಜ್ಯ ತಾಯಕರ ತಲೆಬಿಸಿಕೆ ಕಾರಣವಾಗಿದೆ.

ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ

ಅಲ್ಲಿಯ ವಿಕ್ಟರಿ, ಇಲ್ಲಿ ಗಾಬರಿ ಮೂಡಿಸಿದೆ. ಗುಜರಾತ್'ನಲ್ಲಿ ಬಿಜೆಪಿ ಗೆದ್ದದ್ದಕ್ಕೆ ಇಲ್ಲಿ ಸಂಭ್ರಮಿಸ್ತಾ ಇರೋ ಕೇಸರಿ ಕಲಿಗಳಿಗೆ ಇಲ್ಲೂ ಗುಜರಾತ್ ಸೂತ್ರ ಜಾರಿಯಾಗುವ ಆತಂಕ ಒಳಗೊಳಗೇ ಕಾಡುತ್ತಿದೆ.  ಗುಜರಾತ್'ನಲ್ಲಿ ಬಿಜೆಪಿ ಸಾಧಿಸಿದ ಪ್ರಚಂಡ ಗೆಲುವು ಕರ್ನಾಟಕದಲ್ಲಿ ಕಾಂಗ್ರೆಸ್'ಗೆ ಪಾಠವಾದ್ರೆ, ಕೆಲ ಬಿಜೆಪಿ ಶಾಸಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.