ನನ್ನ ವೋಟು ನನ್ನ ಮಾತು: ಮತ್ತೆ ಜಿಟಿಡಿಗೆ ಒಲಿಯುತ್ತಾಳ ಚಾಮುಂಡೇಶ್ವರಿ?
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ನಡುವೆ ಸಖತ್ ಪೈಪೋಟಿ ಇದೆ.
ಮೈಸೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯೂ ಒಂದು. 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನ ಜಿ. ಟಿ. ದೇವೇಗೌಡ ಮಣಿಸಿದ್ದರು. ಜಿಟಿಡಿ ಅವರಿಗೆ 1,21,325 ಮತಗಳು ಬಿದ್ದಿದ್ದರೆ, ಸಿದ್ದರಾಮಯ್ಯ ಪರ 85,283 ಮತಗಳು ಚಲಾವಣೆಗೊಂಡಿದ್ದವು. ಒಟ್ಟಿನಲ್ಲಿ ಜಿಟಿಡಿ 36,042 ಮತಗಳ ಅಂತರದಿಂದ ಜಯಗಳಿಸಿದ್ದರು. ಆದ್ರೆ ಈ ಬಾರಿ ಜೆಡಿಎಸ್‌ನಿಂದ ಜಿ.ಟಿ. ದೇವೇಗೌಡ ಸ್ಪರ್ಧಿಸಿದ್ದು, ಕಾಂಗ್ರೆಸ್‌ನಿಂದ ಸಿದ್ದೇಗೌಡ, ಬಿಜೆಪಿಯಿಂದ ಕವೀಶ್ ಗೌಡ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಸಿದ್ದೇಗೌಡರು ತುಂಬಾ ಕಠಿಣ ಸ್ಪರ್ಧೆ ನೀಡಲಿದ್ದು, ಯಾರು ಗೆಲ್ತಾರೆ ಎಂಬುದು ತುಂಬಾ ಕುತೂಹಲ ಮೂಡಿಸಿದೆ.
ಇದನ್ನೂ ವೀಕ್ಷಿಸಿ: ನನ್ನ ವೋಟು ನನ್ನ ಮಾತು: ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್ ಗೆಲ್ತಾರಾ ?