ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಬಿಡುಗಡೆ: ಬಾಡಿಗೆದಾರರಿಗಿಲ್ಲ ಉಚಿತ ವಿದ್ಯುತ್‌ ಭಾಗ್ಯ!

ಒಬ್ಬರ ಹೆಸರಿನಲ್ಲಿ ಹೆಚ್ಚು ಆರ್‌.ಆರ್‌. ನಂಬರ್‌ ಇದ್ದರೆ, ಒಂದಕ್ಕೆ ಮಾತ್ರ ಗೃಹ ಜ್ಯೋತಿ ಯೋಜನೆ ಅನ್ವಯವಾಗುತ್ತದೆ ಎಂದು ಹೇಳಲಾಗುತ್ತಿದೆ.

First Published Jun 6, 2023, 11:58 AM IST | Last Updated Jun 6, 2023, 11:58 AM IST

ರ್ಕಾರ ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಉಚಿತ ವಿದ್ಯುತ್‌ ಯೋಜನೆ ಪಡೆಯಲು ರೂಪಿಸಲಾಗಿರುವ ನಿಯಮಾಳಿಗಳು ಈಗ ಚರ್ಚೆಯನ್ನು ಹುಟ್ಟುಹಾಕಿವೆ. ಹಾಗಾದ್ರೆ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಉಚಿತ ವಿದ್ಯುತ್‌ ಭಾಗ್ಯ ಇಲ್ವಾ? ಏನಿದು ಹೊಸ ಸಮಸ್ಯೆ?. 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಅದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ಹಲವು ಆರ್‌.ಆರ್‌.ಸಂಖ್ಯೆ ಹೊಂದಿದ್ದರೆ, ಆ ಪೈಕಿ ಒಂದಕ್ಕೆ ಮಾತ್ರ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ‘ಗೃಹಜ್ಯೋತಿ’ಯೋಜನೆಯ ಲಾಭದಿಂದ ವಂಚಿತರಾಗುವ ಸಾಧ್ಯತೆಯಿದೆ.

ಇದನ್ನೂ ವೀಕ್ಷಿಸಿ: ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ: ಬಸ್‌ ಮಾರಾಟಕ್ಕಿದೆ ಎಂದು ಪೋಸ್ಟರ್ !