ಕಾಂಗ್ರೆಸ್‌ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ:ಜಿ.ಪರಮೇಶ್ವರ್

ರಾಜ್ಯದಲ್ಲಿ  ಕಾಂಗ್ರೆಸ್‌  ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನ ನಾವು ಗೆಲ್ಲುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನ ನಾವು ಗೆಲ್ಲುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎನ್ನುವುದನ್ನು ನಾನು ಸಮೀಕ್ಷೆ ಆಧಾರದ ಮೇಲೆ ಹೇಳುತ್ತಿಲ್ಲ. ಖಚಿತವಾಗಿಯೇ ಹೇಳುತ್ತಿದ್ದೇವೆ. ಜಿಲ್ಲಾವಾರು ಮಾಹಿತಿ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಇನ್ನು ಕಾಂಗ್ರೆಸ್‌ ನಮ್ಮ ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ . ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್​ ತೀರ್ಮಾನ ಮಾಡುತ್ತೆ ಎಂದರು. ಅದಲ್ಲದೆ ಸಿಎಂ ಆಯ್ಕೆ ಬಗ್ಗೆ ನಾನು ಮಾತಾಡುವುದಿಲ್ಲ. ಪದೇ ಪದೇ ನಾವು ಹೇಳಿಕೆ ಕೊಡುವುದರಿಂದ ಗೊಂದಲ ಸೃಷ್ಟಿ ಆಗುತ್ತದೆ. ಹೈಕಮಾಂಡ್, ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡ್ತಾರೆ. ಸಿಎಂ ಆಯ್ಕೆಗೆ ನಮ್ಮಲ್ಲಿ ಯಾವುದೇ ಹೊಸ ಪದ್ದತಿ ಇಲ್ಲ. ಯಾವಾಗಲೂ ಮಾಡುವ ಪ್ರಕಾರವೇ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video