ಇನಾಯತ್‌ ಅಲಿಗೆ ಟಿಕೆಟ್‌: ಮೊಯ್ದಿನ್ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ

ಕಾಂಗ್ರೆಸ್‌ನ ಮತ್ತೊಂದು ವಿಕೆಟ್‌ ಪತನ
ಕಾಂಗ್ರೆಸ್‌ ತೊರೆದ ಮೊಯಿದ್ದೀನ್‌ ಬಾವಾ
ಮೊಯಿದ್ದೀನ್‌ ಬಾವಾ ಜೆಡಿಎಸ್‌ಗೆ ಸೇರ್ಪಡೆ

First Published Apr 20, 2023, 4:13 PM IST | Last Updated Apr 20, 2023, 4:13 PM IST

ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು, ಕಾಂಗ್ರೆಸ್‌ ಇನಾಯತ್‌ ಅಲಿಗೆ ಟಿಕೆಟ್‌ ನೀಡಿದೆ. ಆದ್ರೆ ಮೊಯಿದ್ದೀನ್‌ ಬಾವಾ ಕಾಂಗ್ರೆಸ್‌ನಿಂದ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹಾಗಾಗಿ ಮೊಯಿದ್ದೀನ್‌ ಬಾವಾ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ, ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೊಯಿದ್ದೀನ್‌ ಬಾವಾ, ನನ್ನ ಶತ್ರುವಿಗೆ ಡಿಕೆಶಿ ಟಿಕೆಟ್‌ನನ್ನು ನೀಡಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಗತಿ ಇಲ್ಲದಂತಾಗಿದೆ. ಡಿಕೆಶಿ ಇಲ್ಲಿ ಟಿಕೆಟ್‌ನನ್ನು ಮಾರಿದ್ದಾರೆ. ನನ್ನ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮೊಯಿದ್ದೀನ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ ಫೈನಲ್‌ ಪಟ್ಟಿ ಬಿಡುಗಡೆ: ಹೈಕಮಾಂಡ್‌ ಲೆಕ್ಕಾಚಾರವೇನು?

Video Top Stories