ಷರತ್ತುಗಳ ಹೆಸರಲ್ಲಿ ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿದ ಸರ್ಕಾರವಿದು: ಎಚ್‌ಡಿಕೆ ಕಿಡಿ

ಚುನಾವಣಾ ಪೂರ್ವದಲ್ಲಿ ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದು ನೋಡಿಲ್ವಾ?, ಅದರ ಪ್ರಕಾರ ನಡೆದುಕೊಂಡಿದ್ದಾರೋ?, ಇಲ್ಲ ಈ ಷರತ್ತುಗಳ ಹೆಸರಿನಲ್ಲಿ ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿರತಕ್ಕಂತ ಕಾರ್ಯಕ್ರಮ ಇದಾಗಿದೆ: ಎಚ್‌.ಡಿ. ಕುಮಾರಸ್ವಾಮಿ 

Share this Video
  • FB
  • Linkdin
  • Whatsapp

ಬೆಂಗಳೂರು(ಜು.07): ಕಾಂಗ್ರೆಸ್‌ನವರು ಯಾವುದರಲ್ಲಿ ನುಡಿದಂತೆ ನಡೆದಿದ್ದಾರೆ ಅಂತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. ಚುನಾವಣಾ ಪೂರ್ವದಲ್ಲಿ ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದು ನೋಡಿಲ್ವಾ?, ಅದರ ಪ್ರಕಾರ ನಡೆದುಕೊಂಡಿದ್ದಾರೋ?, ಇಲ್ಲ ಈ ಷರತ್ತುಗಳ ಹೆಸರಿನಲ್ಲಿ ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿರತಕ್ಕಂತ ಕಾರ್ಯಕ್ರಮ ಇದಾಗಿದೆ. ಎಲ್ಲ ಪದವೀಧರರಿಗೆ 3000 ರೂ. ಹಣ ಕೊಡ್ತೀವಿ ಅಂದಿದ್ದರು, ಇದೀಗ ಹೇಳ್ತಿದ್ದಾರೆ 2023 ರಲ್ಲಿ ಪಾಸ್‌ ಆದ ಪದವೀಧರರಿಗೆ ಹಣ ಕೊಡುತ್ತೇವೆ ಅಂತ ಹೇಳಿದ್ತಾರೆ ಅಂತ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿ ವಿಷಯದಲ್ಲಿ ಬಂದಿರುವ ತೀರ್ಪಿನ ಬಗ್ಗೆ ಉತ್ತರ ಕೊಡಲು ನಾನು ಕಾನೂನು ತಜ್ಞ ಅಲ್ಲ: ಎಚ್‌ಡಿಕೆ

Related Video