ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್ ಶಾಕ್: ಬಿಜೆಪಿ-ಜೆಡಿಎಸ್​ ದೋಸ್ತಿಗೆ ಅತಿಹೆಚ್ಚು ಸ್ಥಾನವೆಂದ ಎಲ್ಲ ಸಮೀಕ್ಷೆ!

ಟಾರ್ಗೆಟ್ 20 ಅಸಾಧ್ಯ ಎಂದ ಎಲ್ಲಾ ಮತಗಟ್ಟೆ ಸಮೀಕ್ಷೆಗಳು
ಬಿಜೆಪಿ-ಜೆಡಿಎಸ್​ ದೋಸ್ತಿಗೆ ಅತಿಹೆಚ್ಚು ಸ್ಥಾನವೆಂದ ಎಲ್ಲ ಸಮೀಕ್ಷೆ
ಬಿಜೆಪಿ 20-22,ಜೆಡಿಎಸ್ 03,ಕಾಂಗ್ರೆಸ್‌​ಗೆ 3-5 ಸ್ಥಾನವೆಂದ ಸಮೀಕ್ಷೆ

Share this Video
  • FB
  • Linkdin
  • Whatsapp

ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಹೆಚ್ಚಿನೆಲ್ಲಾ ಸಮೀಕ್ಷೆಗಳು ಬಿಜೆಪಿಗೆ ಕೇಂದ್ರದಲ್ಲಿ ಸರಳ ಬಹುಮತ ಎಂದು ಹೇಳಿದ್ದರೆ, ಕರ್ನಾಟಕದಲ್ಲಿ(Karnataka) ಆಡಳಿತಾರೂಢ ಕಾಂಗ್ರೆಸ್‌(Congress) ದೊಡ್ಡ ಮಟ್ಟದ ವಿರೋಧ ಎದುರಾಗುವ ಲಕ್ಷಣ ತೋರಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ(BJP) ಕನಿಷ್ಠ 17 ರಿಂದ ಗರಿಷ್ಠ 24ರವರೆಗಿನ ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌, 3-6 ಸೀಟ್‌ ಗೆಲ್ಲಬಹುದು ಎಂದಿದೆ. ಅಲ್ಲದೇ ಕಾಂಗ್ರೆಸ್‌ನ ಟಾರ್ಗೆಟ್ 20 ಅಸಾಧ್ಯ ಎಂದು ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇಂಡಿಯಾ ಟುಡೇ(India Today) ಸಮೀಕ್ಷೆಯಲ್ಲಿ ಎನ್‌​ಡಿಎಗೆ 23-25 ಸ್ಥಾನ ಎಂದು ಹೇಳಿದೆ. ಕಾಂಗ್ರೆಸ್​ 3 ರಿಂದ 5 ಸ್ಥಾನ ಗೆಲ್ಲಬಹುದೆಂದು ಇಂಡಿಯಾ ಟುಡೇ ಹೇಳಿದೆ.

ಇದನ್ನೂ ವೀಕ್ಷಿಸಿ: ಮೋದಿ ಗ್ಯಾರಂಟಿ ಎದುರು ವರ್ಕೌಟ್‌ ಆಗಿಲ್ವಾ ಕಾಂಗ್ರೆಸ್‌ ಗ್ಯಾರಂಟಿ? ಮೋದಿಗೆ ಅಧಿಕಾರ ಎಂದ ಎಕ್ಸಿಟ್ ಪೋಲ್‌ಗಳು !

Related Video