Asianet Suvarna News Asianet Suvarna News

ಸಚಿವ ಸಂಪುಟ ಪಟ್ಟಿಯಲ್ಲಿ ಭಾರೀ ಟ್ವಿಸ್ಟ್; Exclusive ಡಿಟೇಲ್ಸ್ ಇಲ್ಲಿದೆ

Aug 4, 2021, 9:01 AM IST

ಬೆಂಗಳೂರು (ಆ. 04):  ಸಿಎಂ ಬೊಮ್ಮಾಯಿ ಅವರ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ 20 ರಿಂದ 24 ಮಂದಿ ಸಂಪುಟ ಸೇರ್ಪಡೆಯಾಗುವ ಸಂಭವವಿದೆ.

News Hour: ಹೈ ಕಮಾಂಡ್ ಪಟ್ಟಿ ನೋಡಿ ಸಿಎಂ ಅಚ್ಚರಿ, ಬೆಂಗಳೂರಿನಲ್ಲಿ ಮತ್ತೆ ಟಫ್ ರೂಲ್ಸ್

ಈ ಬಾರಿಯ ವಿಶೇಷವೆಂದರೆ ಡಿಸಿಎಂ ಹುದ್ದೆಗೆ ವರಿಷ್ಠರು ಒಲವು ತೋರಿಲ್ಲ. ಇನ್ನು ಅರವಿಂದ್ ಬೆಲ್ಲದ್, ಶಶಿಕಲಾ ಜೊಲ್ಲೆ ಹಾಗೂ ಪೂರ್ಣಿಮಾ ಶ್ರೀನಿವಾಸ್ ಹೆಸರು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಈಶ್ವರಪ್ಪಗ ಮಂತ್ರಿಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿಜಯೇಂದ್ರ ಸಂಪುಟ ಸೇರ್ಪಡೆ ವಿಚಾರ ಮೋದಿ ಅಂಗಳದಲ್ಲಿದೆ.  ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ನಡುವೆ ಪೈಪೋಟಿ ಶುರುವಾಗಿದೆ.