Lok Sabha elections 2024: ಮತ ಚಲಾಯಿಸದೆ ಇರೋದು ಮೂರ್ಖತನ: ನಾಗತಿಹಳ್ಳಿ ಚಂದ್ರಶೇಖರ್
ನಗರಪ್ರದೇಶದಲ್ಲಿ ಮತದಾನದ ಬಗ್ಗೆ ಅಸಡ್ಡೆ ಇದೆ, ಮತದಾನ ಅನ್ನೋದು ಸಹ ತಪ್ಪು. ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಹಕ್ಕು. ಸರಿಯಾದ ಸಮಯಕ್ಕೆ ತೆರಳಿ ಮತದಾನ ಮಾಡಬೇಕು ಎಂದು ಚುನಾವಣಾ ರಾಯಭಾರಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ (Lok Sabha elections 2024) ಹಿನ್ನೆಲೆ ಮತದಾನ ಮಾಡಿ ಅಂತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನೀಡಿರೋದು ನನಗೆ ಖುಷಿ ತಂದಿದೆ ಎಂದು ಚುನಾವಣಾ ರಾಯಭಾರಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Director Nagathihalli Chandrashekar) ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಮತದಾನದ ಬಗ್ಗೆ ಅಸಡ್ಡೆ ಇದೆ, ಮತಯಾಚನೆ, ಮತದಾನ ಅನ್ನೋದು ಸಹ ತಪ್ಪು. ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂದ ಅವರು, ಸರಿಯಾದ ಸಮಯಕ್ಕೆ ತೆರಳಿ ಮತದಾನ ಮಾಡಬೇಕು. ಅಲ್ಲದೆ ವೈಯಕ್ತಿಕ ನೋವಿಗಾಗಿ ಮತಚಲಾಯಿಸದೆ ಇರೋದು ತಪ್ಪು, ಮತದಾನ ಅನ್ನೋದು ಹೊಣೆಗಾರಿಕೆ, ವ್ಯವಸ್ಥೆಗೆ ಋಣಿಯಾಗಿರ್ಬೇಕು. ಪರಿಣಾಮ ಮತದಾನ ಮಾಡಬೇಕು ಎಂದು ಹೇಳಿದ್ದಾರೆ.
ಹಾಗೆಯೇ ಹಳ್ಳಿಗಳಲ್ಲಿ ಕಾರ್ಯಕ್ರಮ ಮಾಡಿ ಮತದಾನದ ಬಗ್ಗೆ ಅರಿವು ಮೂಡಿಸ್ತಿದ್ದೇನೆ. ನೀವು ಮತ ಹಾಕುವ ವ್ಯಕ್ತಿ ಸೋಲ್ತಾನೆ ಅಂದ್ರು ಕೂಡ ಮತದಾನ ಮುಖ್ಯ. ರಜೆ ಇದೆ ಮೋಜು ಮಸ್ತಿ ಮಾಡಲು ಹೋಗುವ ವ್ಯಕ್ತಿ ಮೂರ್ಖ, ಮತ ಚಲಾಯಿಸದೆ ಮಸ್ತಿಗಾಗಿ ಟ್ರಿಪ್ ಮಾಡುವ ವ್ಯಕ್ತಿ ಎಲ್ಲಾ ಸವಲತ್ತು ಪಡೆದಿರುತ್ತಾನೆ. ಆದ್ರೆ, ಮತ ಚಲಾಯಿಸದೆ ಇರೋದು ಮೂರ್ಖತನ. ಹೆಚ್ಚು ಮತದಾನಕ್ಕಾಗಿ ಚುನಾವಣಾ ಆಯೋಗ ಸಹ ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಲವು ಒತ್ತಡದ ಮಧ್ಯೆಯೂ ನಾನು ಚುನಾವಣೆಯಲ್ಲಿ ಮತದಾನ ಮಾಡಲು ಜಾಗೃತಿ ಮೂಡಿಸ್ತಿದ್ದೇನೆ. ಚುನಾವಣೆ ಹಿನ್ನಲೆ ಎಲ್ಲಾ ಶೂಟಿಂಗ್ ಮುಗಿಸಿಕೊಳ್ಳಲಾಗುತ್ತಿದೆ. ಅಲ್ಲದೆ. ನಾಳೆ ಶೂಟಿಂಗ್ ರಜೆ ಮಾಡಲಾಗಿದೆ. ಈ ಮೂಲಕ ಪ್ರತಿಯೊಬ್ಬರು ಮತ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ಹೊಹಾಕಿದರು.
ಇದನ್ನೂ ವೀಕ್ಷಿಸಿ: ಇದು ಕುರ್ಚಿ ಕಾಳಗವಲ್ಲ,ಅವಳಿ ದಂಡನಾಯಕರ ಗೆರಿಲ್ಲಾ ವಾರ್!ಸಕ್ಸಸ್ ಮಂತ್ರವನ್ನೇ ಅಸ್ತ್ರವಾಗಿ ಹಿಡಿದಿದ್ದಾರೆ ಸಿದ್ದು,ಡಿಕೆಶಿ!