ಇದು ಕುರ್ಚಿ ಕಾಳಗವಲ್ಲ,ಅವಳಿ ದಂಡನಾಯಕರ ಗೆರಿಲ್ಲಾ ವಾರ್!ಸಕ್ಸಸ್ ಮಂತ್ರವನ್ನೇ ಅಸ್ತ್ರವಾಗಿ ಹಿಡಿದಿದ್ದಾರೆ ಸಿದ್ದು,ಡಿಕೆಶಿ!
ಲೋಕಯುದ್ಧದಲ್ಲೂ ಸದ್ದು ಮಾಡ್ತಿದೆ ಸಿದ್ದು Vs ಡಿಕೆ "ಸಿಎಂ ಪಟ್ಟ" ಫೈಟ್!
ಅವತ್ತು ಸಿಎಂ ಪಟ್ಟಕ್ಕೆ ಕುಸ್ತಿ.. ಕುಸ್ತಿಯ ಹಿಂದಿತ್ತು ವಿಜಯ ಮಂತ್ರದ ದೋಸ್ತಿ!
ಕುರ್ಚಿ ಕಾಳಗದ ನೆಪದಲ್ಲಿ ರಾಜ್ಯ ಗೆಲ್ಲುವ ತಂತ್ರ ಹೆಣೆದಿದ್ದರು ಸಿದ್ದು-ಡಿಕೆ..!
ಅಬ್ಬರದ ಪ್ರಚಾರಕ್ಕೆ ಈಗ ಬ್ರೇಕ್ ಬಿದ್ದಿದ್ದು, ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. 2024 ಲೋಕ ಸಮರಕ್ಕೆ ಅಖಾಡ ಸಿದ್ಧವಾಗಿದೆ. ಇಷ್ಟು ದಿನ ಬಹಿರಂಗವಾಗಿ ಅಬ್ಬರದ ಪ್ರಚಾರ ಮಾಡಿದ್ದಾಯ್ತು. ಅಲ್ಲಲ್ಲಿ ಭರ್ಜರಿಯಾಗಿ ಕ್ಯಾಂಪೇನ್ ಮಾಡಿದ್ದೂ ಆಯ್ತು. ಈಗ ಅದೆಲ್ಲದಕ್ಕೂ ಬ್ರೇಕ್, ಈಗೇನಿದ್ದರೂ ಏಪ್ರಿಲ್ 26ಕ್ಕೆ ವೋಟ್(Vote) ಮಾಡೋದಕ್ಕೆ ಕೌಂಟ್ ಡೌನ್ ಶುರು. ರಾಜ್ಯದಲ್ಲಿ ಮೊದಲ ಹಂತದದಲ್ಲಿ 14 ಕ್ಷೇತ್ರಗಳಲ್ಲಿ, ಇದೇ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಈ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು ಹಾಸನ ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಈಗ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗಂತ ಅಭ್ಯರ್ಥಿಗಳ ಪರ ಪ್ರಚಾರ(Campaign) ಕಾರ್ಯ ನಡೆಯುವುದೇ ಇಲ್ಲ ಅರ್ಥ ಅಲ್ಲ. ಅಭ್ಯರ್ಥಿಗಳು ಈಗ ಸ್ವತಃ ತಾವೇ ತಮ್ಮ ಕ್ಷೇತ್ರದದಲ್ಲಿರವ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಾರೆ. ಇಲ್ಲಾ ಕಾರ್ಯಕರ್ತರು ಮನೆಗಳಿಗೆ ಹೋಗಿ ಮತದಾರರ ಮನವೋಲಿಸುವ ಪ್ರಯತ್ನ ಮಾಡುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿಗೂ ಇದು ಪ್ರತಿಷ್ಠೆಯ ಕಣವಾಗಿರುವುದರಿಂದ, ಗೆಲ್ಲೊದಕ್ಕೆ ಏನೆಲ್ಲ ಕಸರತ್ತುಗಳನ್ನ ಮಾಡ್ಬೇಕಾಗಿದೆಯೋ ಅದೆಲ್ಲವನ್ನೂ ಮಾಡಲಾಗ್ತಿದೆ.
ಇದನ್ನೂ ವೀಕ್ಷಿಸಿ: ನಾಲ್ಕು ಮಕ್ಕಳಿದ್ದರೂ ಪೂಜಾರಿ ಮಗಳ ಜೊತೆ ಲವ್..! ಅವನನ್ನ ಮುಗಿಸಲು ಇಡೀ ಕುಟುಂಬವೇ ಒಂದಾಗಿತ್ತು..!