ಬೆಳಗಾವಿಯಲ್ಲಿ ಮೂಲ VS ವಲಸಿಗ ಕಿತ್ತಾಟ: ಲೋಕಸಭಾ ಟಿಕೆಟ್ ಆಕಾಂಕ್ಷಿಗಳ್ಯಾರು..?

ಬೆಳಗಾವಿಯಲ್ಲಿ ಈಗಾಗಲೇ ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು, ಮೂಲ ಮತ್ತು ವಲಸಿಗರ ನಡುವೆ ಕಿತ್ತಾಟ ಆರಂಭವಾಗಿದೆ.
 

First Published Aug 14, 2023, 11:01 AM IST | Last Updated Aug 14, 2023, 11:01 AM IST

ಬೆಳಗಾವಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ(Loksabha election) ಸದ್ದಿಲ್ಲದೇ ಬೆಳಗಾವಿ ಅಖಾಡ ರೆಡಿಯಾಗ್ತಿದೆ. ವಿಧಾನಸಭೆ ಸೋಲಿನ ಬಳಿಕ ಬಿಜೆಪಿ ಯಾರಿಗೆ ಮಣೆ ಹಾಕುತ್ತೆ ಎಂಬುದೇ ಪ್ರಶ್ನೆಯಾಗಿದೆ. ಬಿ.ಎಲ್. ಸಂತೋಷ್‌ರನ್ನು(BL Santosh) ರಮೇಶ್ ಜಾರಕಿಹೊಳಿ(Ramesh Jarakiholi) ಭೇಟಿಯಾಗಿದ್ದಾರೆ. ಇದು ಲೋಕಸಭೆ ಚುನಾವಣೆ ತಯಾರಿ ಹೊಸ್ತಿಲಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಾಹುಕಾರ್ ಭೇಟಿ ಮುನ್ನ ಮಹಾಂತೇಶ್ ಕವಟಗಿಮಠ ಸಹ ಭೇಟಿ ಮಾಡಿದ್ದಾರೆ. ಬೆಳಗಾವಿ(Belagavi) ಲೋಕಸಭಾ ಟಿಕೆಟ್ ಮೇಲೆ ಕವಟಗಿಮಠ ಕಣ್ಣಿಟ್ಟಿದ್ದಾರೆ. ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಯತ್ನ ಮಾಡುತ್ತಿದ್ದಾರೆ. ಎಂಎಲ್ಸಿ ಚುನಾವಣೆ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದ್ದು, ರಮೇಶ್ ಜಾರಕಿಹೊಳಿ ಯಾರ ಪರ ನಿಲ್ತಾರೆಂಬುದೇ ಕುತೂಹಲ ಮೂಡಿಸಿದೆ. ಅಲ್ಲದೇ ಸಾಹುಕಾರ್ ವಿರುದ್ಧ ಮೂಲ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಮೇರಾ ಮಿಟ್ಟಿ ಮೇರಾ ಭಾರತ್ ಮೋದಿ ಕನಸಿಗೆ ಎಲ್ಲರೂ ಕೆಲಸ ಮಾಡಿ: ರಾಜೀವ್‌ ಚಂದ್ರಶೇಖರ್‌