ಗೋವಾ, ಉತ್ತಾರಾಖಂಡದಲ್ಲಿ ಕಾಂಗ್ರೆಸ್-ಬಿಜೆಪಿ ಫೈಟ್

ಲೋಕನೀತಿ- ಸಿಎಸ್‌ಡಿಎಸ್ ಎಕ್ಸಿಟ್ ಪೋಲ್ಕಾಂಗ್ರೆಸ್‌ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿಉತ್ತರಾಖಂಡದಲ್ಲೂ ಬಿಜೆಪಿಗೆ ಮತದಾರ ಜೈ?

Share this Video
  • FB
  • Linkdin
  • Whatsapp

ನವದೆಹಲಿ (ಮಾ. 9): ಗೋವಾ (Goa) ಹಾಗೂ ಉತ್ತಾರಾಖಂಡ (Uttarakhand) ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಲಿದೆ? ಎಂಬುವುದಕ್ಕೂ ಲೋಕನೀತಿ- ಸಿಎಸ್‌ಡಿಎಸ್ (lokniti-csds) ಸಮೀಕ್ಷೆ ಉತ್ತರ ಕೊಟ್ಟಿದೆ. ಪುಟ್ಟ ರಾಜ್ಯಗಳಾದರೂ ರಾಷ್ಟ್ರ ರಾಜಕಾರಣದ ಮೇಲೆ ಅದರದ್ದೇ ಆದ ಛಾಪು ಪೂಡಿಸಲಿವೆ ಇಲ್ಲಿನ ಚುನಾವಣಾ ಫಲಿತಾಂಶ (Election Results). ಎರಡೂ ಕಡೆ ಬಿಜೆಪಿ (BJP) ಅಧಿಕಾರದಲ್ಲಿದ್ದೂ, ಅದನ್ನು ಉಳಿಸುವ ಸವಾಲು ಬಿಜೆಪಿ ಮುಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವಾದಲ್ಲಿ ಕಾಂಗ್ರೆಸ್‌ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಲೋಕನೀತಿ- ಸಿಎಸ್‌ಡಿಎಸ್ ಎಕ್ಸಿಟ್‌ ಪೋಲ್‌ ಪ್ರಕಾರ ಗೋವಾದಲ್ಲಿ ಬಿಜೆಪಿ 32 ಶೇಕಡಾ ಮತಗಳನ್ನು ಪಡೆದರೆ, ಕಾಂಗ್ರೆಸ್ 29 ಶೇಕಡಾ ಮತ ಗಳಿಸಲಿದೆ . ತೃಣಮೂಲ ಕಾಂಗ್ರೆಸ್‌ 14 ಶೇಕಡಾ ಹಾಗೂ ಆಮ್ ಆದ್ಮಿ ಪಾರ್ಟಿ 7 ಶೇಕಡಾ ವೊಟ್‌ ಶೇರ್ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

5 States Election: ಉ.ಪ್ರ.ಕ್ಕೆ ಮತ್ತೆ ಯೋಗಿ ರಾಜ್ಯಭಾರ, ಪಂಜಾಬ್‌ಗೆ ಆಪ್‌..?
ಇನ್ನು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಂಡಿತಾ ಎಂದು ಸಮೀಕ್ಷೆ ಹೇಳಿದೆ. 43 ಶೇ ಮತ ಗಳಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌ 38 ಶೇಕಡಾ ಮತ ಪಡೆಯಲಿದೆ.

Related Video