ವಿಧಾನಪರಿಷತ್‌ನ 3 ಸ್ಥಾನಗಳಿಗೆ ಚುನಾವಣೆ:ಕಾಂಗ್ರೆಸ್‌ನ ಮಾಸ್ಟರ್ ಪ್ಲ್ಯಾನ್ ಏನು?
ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್ ವಶವಾಗುವ ಸಾಧ್ಯತೆ ಇದೆ.
ವಿಧಾನ ಪರಿಷತ್‌ನಲ್ಲಿ ತೆರವಾದ ಮೂರು ಸ್ಥಾನಗಳಿಗೆ ಜೂ.30ಕ್ಕೆ ಮತದಾನ ನಡೆಯಲಿದೆ. ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರ್, ಆರ್. ಶಂಕರ್ ಹಾಗೂ ಲಕ್ಷ್ಮಣ ಸವದಿ ರಾಜೀನಾಮೆಯಿಂದ ಈ ಮೂರು ಸ್ಥಾನಗಳು ತೆರವಾಗಿವೆ. ಈ ಮೂರು ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಆರಂಭವಾಗಿದೆ.ಬಾಬುರಾವ್ ಚಿ೦ಚನಸೂರು ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್ 17ಕ್ಕೆ, ಆರ್ ಶ೦ಕರ್ ಅವರ ಅವಧಿ 2026 ರ ಜೂನ್ 30ಕ್ಕೆ , ಲಕ್ಷ್ಮಣ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ಕ್ಕೆ ಕೊನೆಗೊಳ್ಳಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್ 20ರ ವರೆಗೆ ಅವಕಾಶವಿದೆ. ಆರ್. ಶಂಕರ್ ತೆರವು ಮಾಡಿರುವ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಬರುವ ಸ್ಯಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ಸಖತ್ ಆಗಿ ತಿಂತಾರೆ : ನಟ ಅಭಿಷೇಕ್