ತ್ರಿಮೂರ್ತಿಗಳಲ್ಲಿ ಯಾರಾಗ್ತಾರೆ ಬಾಳಾ ಠಾಕ್ರೆ ಉತ್ತರಾಧಿಕಾರಿ?

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರದ ಬಲ ಕುಂದಿ ಹೋಗಿ ಹಲವು ದಿನಗಳೇ ಆಗಿವೆ. ಬಂಡಾಯ ಶಿವಸೇನೆ ಶಾಸಕರು ಉದ್ಧವ್‌ ಠಾಕ್ರೆ ಸರ್ಕಾರವನ್ನು ಬೀಳಿಸಲು ಮಾಡಿರುವ ಶ್ರಮ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸದ್ಯ ಈ ವಿಚಾರವೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 29): ಫೈರ್‌ ಬ್ರ್ಯಾಡ್‌ ರಾಜ್‌ ಠಾಕ್ರೆ (Raj Thackeray ) ಜೊತೆ ಏಕನಾಥ್‌ ಶಿಂಧೆ (Eknath shinde) ಗುಪ್ತ್‌ ಗುಪ್ತ್‌ ಚರ್ಚೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆಯ (Shiv sena) ಉತ್ತರಾಧಿಕಾರಿ ಯಾರಾಗ್ತಾರೆ ಎನ್ನುವ ವಿಚಾರವೂ ಕುತೂಹಲಕ್ಕೆ ಕಾರಣವಾಗಿದೆ. 

ಸದ್ಯದ ಮಟ್ಟಿಗೆ ಬಾಳಾಸಾಹೇಬ್‌ ಠಾಕ್ರೆ ಪುತ್ರ ಉದ್ಧವ್‌ ಠಾಕ್ರೆ (uddhav thackeray), ಸಂಬಂಧಿ ರಾಜ್‌ ಠಾಕ್ರೆ ಹಾಗೂ ಥಾಣೆಯ ಬಲಿಷ್ಠ ನಾಯಕ ಹಾಗೂ ಇಡೀ ಬಂಡಾಯದ ಸೂತ್ರಧಾರಿ ಏಕನಾಥ್‌ ಶಿಂಧೆ ನಡುವೆ ಪೈಪೋಟಿ ಕಾಣುತ್ತಿದೆ. ಈ ಮೂವರಲ್ಲಿ ಶಿವಸೇನೆಯ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ನನಗೆ 50 ಶಾಸಕರ ಬೆಂಬಲ, ತೆರೆಮರೆ ರಾಜಕೀಯ ಬಿಟ್ಟು ಹೋಟೆಲ್‌ನಿಂದ ಹೊರಬಂದ ಶಿಂಧೆ!

ಈಗಾಗಲೇ ಮಹಾರಾಷ್ಟ್ರದಲ್ಲಿ ಬಂಡಾಯದ ಕಿಚ್ಚು ಹಬ್ಬಿ ಒಂದು ವಾರವಾಗಿದೆ. ಉದ್ಧವ್‌ ಠಾಕ್ರೆ ಪಾಲಿಗೆ ಈಗ ಆಪ್ತರಾಗಿದ್ದವರೇ ದುಶ್ಮನ್‌ಗಳಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಆಗುವವರೆಗೂ ಅಸ್ಸಾಂನ ಗುವಾಹಟಿಯಿಂದ ಬರೋದಿಲ್ಲ ಎಂದು ಬಂಡಾಯ ಶಾಸಕರು ಹೇಳಿರುವ ಕಾರಣ, ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ಅಘಾಡಿ ಸರ್ಕಾರ ಪತನವಾಗವುದು ಬಹುತೇಕ ಖಚಿತವಾಗಿದೆ.

Related Video