Asianet Suvarna News Asianet Suvarna News

ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !

ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ ಅಂದರೆ ಏನು ಮಾಡುವುದು? 
ವಾಪಸ್ ಉದ್ಧವ್ ಠಾಕ್ರೆ ಬಳಿ ಹೋಗುವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ
ರಾಜಕೀಯ ತೊಳಲಾಟದ ನಡುವೆ ಪ್ರಧಾನಿಯನ್ನೇ ಭೇಟಿ ಮಾಡಿದ ಶಿಂಧೆ

ಅಜಿತ್ ಪವಾರ್ ಡಿಸಿಎಂ ಹುದ್ದೆ ಏರಿದ ಬಳಿಕ ಶಿಂಧೆ ಬಣಕ್ಕೆ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. ಹೀಗಾಗಿ ಏಕನಾಥ್‌ ಶಿಂಧೆ(Eknath Shinde) ನೇರವಾಗಿ ಪ್ರಧಾನಿ ಮೋದಿಯನ್ನೇ(Modi) ಭೇಟಿ ಮಾಡಿದ್ದಾರೆ. ಫಡ್ನವೀಸ್, ಅಮಿತ್ ಶಾ(Amit Shah) ಬಿಟ್ಟು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೋದಿ ಮುಂದೆ ತಮ್ಮ ಮನದ ಬೇಗುದಿಯನ್ನು ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ. ಶಿಂಧೆ ಬಣ ಶಿವಸೇನೆ ತೊರೆಯಲು ಕಾರಣವಾಗಿದ್ದೇ ಅಜಿತ್ ಪವಾರ್ ಎನ್ನಲಾಗ್ತಿದೆ. ಅಘಾಡಿ ಸರ್ಕಾರದಲ್ಲಿ ಅಜಿತ್ ಪವಾರ್‌ ಶಿವಸೇನೆಗೆ ಕ್ಯಾರೇ ಎನ್ನುತ್ತಿರಲಿಲ್ಲ. ಇದೇ ಕಾರಣಕ್ಕೆ ಸರ್ಕಾರ, ಪಕ್ಷ ತೊರೆದು ಬಂದಿದ್ದ ಏಕನಾಥ್ ಶಿಂಧೆ ಟೀಂ, ಈಗ ಅದೇ ಅಜಿತ್ ದಾದಾ ಪವಾರ್ ಕರೆತಂದು ಡಿಸಿಎಂ ಮಾಡಿದೆ. ಮುಂದೆ ಚುನಾವಣೆ ಹೊತ್ತಲ್ಲಿ ತಮ್ಮನ್ನೇ ದೂರ ಮಾಡಿದ್ರೆ ಎನ್ನುವ ಆತಂಕ ಹಾಗೂ ಕೊನೆಯ 6 ತಿಂಗಳು ಅಜಿತ್‌ ಪವಾರ್‌ರನ್ನು ಸಿಎಂ ಮಾಡಿದ್ರೆ ಎನ್ನುವ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. 2024ರಲ್ಲಿ ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ತಮ್ಮನ್ನು ದೂರ ಇಟ್ಟರೆ ಎಂಬ ಆತಂಕ ಸಹ ಶಿಂಧೆ ಬಣಕ್ಕೆ ಕಾಡತೊಡಗಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಉದ್ಯಮಿ ಮನೆಯಲ್ಲಿ ಶರದ್-ಅಜಿತ್ ಪವಾರ್ ಸಭೆ: ಈ ಭೇಟಿ ಹಿಂದಿನ ರಹಸ್ಯವೇನು..?

Video Top Stories