ಸಿದ್ದು ಕಾರಿಗೆ ಮೊಟ್ಟೆ ಎಸೆದ ಯುವಕ ಯಾರು? ಪಕ್ಷಗಳಲ್ಲಿ ನಮ್ಮವನಲ್ಲ ಫೈಟ್!
ಸಿದ್ದರಾಮಯ್ಯಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಕೊಡುಗು ಪ್ರವಾಸದಲ್ಲಿ ಮಾಂಸಾಹಾರ ಸೇವಿಸಿ ಕೊಡ್ಲಿಪೇಟೆಯ ದೇವಸ್ಥಾನಕ್ಕೆ ಭೇಟಿ ನೀಡಿದ ಆರೋಪ ಕೇಳಿಬಂದಿದೆ. ಸಿದ್ದು ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಸೇರಿದಂತೆ ಇಡೀ ದಿನದ ಸಂಪೂರ್ಣ ಸುದ್ದಿಗಳ ನ್ಯೂಸ್ ಹವರ್ ಇಲ್ಲಿದೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಯುವಕ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದಾನೆ. ಇದು ಮತ್ತೊಂದು ವಾಕ್ಸಮರಕ್ಕೆ ಕಾರಣಾಗಿದೆ. ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಯುವಕ ಹೇಳಿಕೊಂಡಿದ್ದಾನೆ. ಇತ್ತ ಕಾಂಗ್ರೆಸ್ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿ ಈತ ಬಿಜೆಪಿ ಕಾರ್ಯಕರ್ತ ಎಂದಿದೆ. ಇದರ ಬೆನ್ನಲ್ಲೇ ಕೆಲ ದಾಖಲೆಗಳು ಲಭ್ಯವಾಗಿದೆ.ನಮ್ಮ ಕಾರ್ಯಕರ್ತರಿಗೆ ಕರೆ ನೀಡಿದರೆ ಸಚಿವರು ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ. ಇದು ಡಿಕೆಶಿ ಸಂಸ್ಕೃತಿ ಎಂದಿದ್ದಾರೆ. ವೀರ ಸಾವರ್ಕರ್ ಫೋಟೋ ವಿಚಾರ, ಕಾಂಗ್ರೆಸ್ ಪ್ರತಿಭಟನೆ, ಸಿದ್ದರಾಮಯ್ಯ ಪಶ್ಚತ್ತಾಪ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.