Asianet Suvarna News Asianet Suvarna News

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದೇ ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಕಾರಣ: ಡಿ.ವಿ. ಸದಾನಂದ ಗೌಡ

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಕಾರಣ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿರುವುದು. ಲೋಕಸಭಾ ಚುನಾವಣೆ ಮೇಲೆ ಈ ರಾಜ್ಯಗಳ ಫಲಿತಾಂಶ ಬೀರುತ್ತದೆ ಎಂದು ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ(Chhattisgarh) ನಾವು ಖಂಡಿತಾ ಗೆಲ್ಲುತ್ತೇವೆ. ಅಲ್ಲಿ ನಕ್ಸಲೈಟ್ಸ್‌ ನಿರ್ಣಾಮ ಮಾಡಲು ನಮ್ಮ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಜನರಿಗೆ ಇಷ್ಟವಾಗಿದೆ. ಇದೀಗ ಅವರು ಸ್ವತಂತ್ರವಾಗಿ ಹೊರಬಂದು ಕೆಲಸವನ್ನು ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಹೆಚ್ಚು ಒತ್ತನ್ನು ನೀಡಿದ್ದೇವೆ. ಇದರಿಂದ ಜನ ಭಾರೀ ಸಂತೋಷಗೊಂಡಿದ್ದಾರೆ ಎಂದು ಡಿ.ವಿ. ಸದಾನಂದ ಗೌಡ(D. V. Sadananda Gowda) ಹೇಳಿದ್ದಾರೆ. ನಮ್ಮ ಆಂತರಿಕ ಕಚ್ಚಾಟ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದ ನಾವು ಕರ್ನಾಟಕದಲ್ಲಿ(karnataka) ಸೋತಿದ್ದೇವೆ. ಕರ್ನಾಟಕದಲ್ಲಿ ಆದ ವ್ಯತ್ಯಾಸವನ್ನು ಕೇಂದ್ರ ನಾಯಕರು ಒಪ್ಪಿಕೊಂಡು, ಇದನ್ನು ಎಲ್ಲಾ ಕಡೆ ಅನುಷ್ಠಾನ ಮಾಡಿದ್ದಾರೆ. ಹಾಗಾಗಿ ನಮಗೆ ಗೆಲುವ ದೊರೆಯಲಿದೆ. ಈ ಬಾರೀ ಕಾಂಗ್ರೆಸ್‌ ಮೈನಾರಿಟಿ ಓಟ್ಸ್‌ ಪಡೆಯುವಲ್ಲಿ ಸಕ್ಸಸ್‌ ಆಗಿದೆ. ಹಾಗಾಗಿ ಅವರು ಅಲ್ಲಿ ಗೆದ್ದಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ನಮ್ಮ ಗ್ಯಾರಂಟಿ ಕಾರ್ಡ್‌ ನಮಗೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ: ಶಾಸಕ ಪ್ರದೀಪ್‌ ಈಶ್ವರ್‌

Video Top Stories