Asianet Suvarna News Asianet Suvarna News

ನಮ್ಮ ಗ್ಯಾರಂಟಿ ಕಾರ್ಡ್‌ ನಮಗೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ: ಶಾಸಕ ಪ್ರದೀಪ್‌ ಈಶ್ವರ್‌

ನಮ್ಮ ಗ್ಯಾರಂಟಿ ಕಾರ್ಡ್‌ ಈ ಯಶಸ್ಸನ್ನು ತಂದು ಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿದ್ದರಿಂದ ಅದರ ಇಂಪ್ಯಾಕ್ಟ್‌ ತೆಲಂಗಾಣದಲ್ಲೂ ಆಗಿದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌(MLA Pradeep Eshwar) ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ತೆಲಂಗಾಣದಲ್ಲಿ ಕಾಂಗ್ರೆಸ್‌(COngress) ಮುನ್ನಡೆಯಲ್ಲಿ ಇರುವ ಬಗ್ಗೆ ಮಾತನಾಡಿದ್ದಾರೆ. ತೆಲಂಗಾಣದ(Telangana) ಜನತೆ ಕೆಸಿಆರ್‌ ಅವರ ಆಡಳಿತ ವೈಖರಿಯಿಂದ ಬೇಸತ್ತು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಮ್ಮ ಗ್ಯಾರಂಟಿ ಕಾರ್ಡ್‌ ಈ ಯಶಸ್ಸನ್ನು ತಂದು ಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿದ್ದರಿಂದ ಅದರ ಇಂಪ್ಯಾಕ್ಟ್‌ ತೆಲಂಗಾಣದಲ್ಲೂ ಆಗಿದೆ. ತೆಲಂಗಾಣ ಕಾಂಗ್ರೆಸ್‌ ನಾಯಕರಲ್ಲಿ ಒಗ್ಗಟ್ಟು ಇತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಪ್ರಚಾರದವರೆಗೂ ನಮ್ಮ ತಂತ್ರಗಾರಿಕೆ ಚೆನ್ನಾಗಿತ್ತು. ಸಂಪೂರ್ಣ ಬಹುಮತದೊಂದಿಗೆ ನಾವು ತೆಲಂಗಾಣದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನೀವು ಏನ್ ಹೇಳ್ತೀರಾ? ಆರ್‌. ಅಶೋಕ್‌ ಅಡ್ಜಸ್ಟ್ಮೆಂಟ್ ರಾಜಕಾರಣಿನಾ ?