Asianet Suvarna News Asianet Suvarna News

ನಾನು 25 ವರ್ಷ ಎಲೆಮರೆ ಕಾಯಿಯಂತೆ ಪಕ್ಷಕ್ಕೆ ದುಡಿಸಿದ್ದೇನೆ: ಟಿಕೆಟ್‌ ಆಕಾಂಕ್ಷಿ ಡಾ.ಸುಶ್ರುತ್ ಗೌಡ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ಅಖಾಡ ರಂಗೇರುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಆ್ಯಕ್ಟೀವ್ ಆಗಿದ್ದಾರೆ.
 

ಚುನಾವಣೆ ಹತ್ತಿರವಾಗ್ತಿದ್ದಂತೆ ಮೈಸೂರು ಅಖಾಡ ರಂಗೇರುತ್ತಿದೆ. ಕಾಂಗ್ರೆಸ್‌ನಲ್ಲಿ(Congress) ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿರುವ ಆಕಾಂಕ್ಷಿತರು. ಕ್ಷೇತ್ರದಲ್ಲಿ ಆ್ಯಕ್ಟಿವ್ ಆದ ಕಾಂಗ್ರೆಸ್ ಟಿಕೆಟ್(Ticket) ಆಕಾಂಕ್ಷಿ ಡಾ. ಸುಶ್ರುತ್ ಗೌಡ, ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಪಾಲಿಕೆ ಮತ್ತು ಗೋಪಾಲಗೌಡ ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ನೂರಕ್ಕೆ ನೂರು ನಾನು ಆಕಾಂಕ್ಷಿ ಎಂದ ಡಾ. ಸುಶ್ರುತ್ ಗೌಡ(Dr.Sushrut Gowda). ನಾನು 25 ವರ್ಷ ಎಲೆಮರೆ ಕಾಯಿಯಂತೆ ಪಕ್ಷಕ್ಕೆ ದುಡಿದಿದ್ದೇನೆ. ವೈದ್ಯನಾಗಿ 18 ವರ್ಷ ವಿದೇಶದಲ್ಲಿ ಕೆಲಸ ಮಾಡಿದ್ದೇನೆ. ಭಾರತ್ ಜೋಡೋ ಯಾತ್ರೆಯಲ್ಲಿ ಕೆಲಸ ಮಾಡಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಏಕೈಕ ಒಕ್ಕಲಿಗ ವೈದ್ಯ ನಾನು ಎಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಒಕ್ಕಲಿಗ ಅಸ್ತ್ರವನ್ನು ಸುಶ್ರುತ್‌ ಪ್ರಯೋಗ ಮಾಡಿದ್ದಾರೆ. ನನ್ನನ್ನೂ ಸೇರಿ ಪಕ್ಷದಲ್ಲಿ 16 ಜನ ಆಕಾಂಕ್ಷೆಗಳು ಇದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಭದ್ರಕೋಟೆಯನ್ನ ಈ ಬಾರಿ‌ ಛಿದ್ರ ಮಾಡುತ್ತೇವೆ ಎಂದು ಡಾ. ಸುಶ್ರುತ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಇನ್ನೂ ಒಂದು ವಾರ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಒತ್ತಡಕ್ಕೆ ಮಣಿದು ರಾಹುಲ್ ಈ ಸೂಚನೆ ನೀಡಿದ್ರಾ..!

Video Top Stories