ಸುನೀಲ್ ಕನುಗೋಳು ಸರ್ವೇಯಲ್ಲೂ ಕಾಂಗ್ರೆಸ್‌ಗೆ ಒಂದಂಕಿ‌ ಸೀಟ್..! ಜಾತಿ ಸಮೀಕರಣ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಲು ಸೂಚನೆ

ಸಮರ್ಥ ಅಭ್ಯರ್ಥಿಗಳಿಲ್ಲದಿದ್ದರೆ 8 ಕ್ಕಿಂತ ಕಡಿಮೆ ಸ್ಥಾನ ಎಂದು ಅಭಿಪ್ರಾಯ  
ಅಹಿಂದ ಕಾಂಬಿನೇಷನ್ ಕ್ಷೇತ್ರಗಳಲ್ಲಿ ಎಚ್ಚರಿಕೆ ಹೆಜ್ಜೆ ಇಡಲು 'ಕೈ'ಗೆ ಸೂಚನೆ
ಜಾತಿ ಸಮೀಕರಣ ಗುರಿಯಾಗಿಸಿಕೊಂಡು ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪ್ಲ್ಯಾನ್  

First Published Mar 9, 2024, 10:36 AM IST | Last Updated Mar 9, 2024, 10:37 AM IST

ಲೋಕಸಭೆ ಚುನಾವಣಾ(Loksabha) ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ(Congress) ಬಿಗ್ ಶಾಕ್ ನೀಡಲಾಗಿದೆ. ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲೂ(Internal Survey) ನಿರಾಸೆಯಾಗಿದೆ. ಸುನೀಲ್‌ ಕುನುಗೋಳು(Sunil Kunugolu) ನಡೆಸಿರುವ ಸರ್ವೇಯಲ್ಲೂ ಕಾಂಗ್ರೆಸ್‌ಗೆ ಒಂದಂಕಿ ಸೀಟ್‌ ಸಿಗಲಿದೆ ಎಂದು ತಿಳಿದುಬಂದಿದೆ. ಯಾವುದೇ ಅಭ್ಯರ್ಥಿಗಳ ಹೆಸರಿಲ್ಲದೆ ನಡೆಸಿರುವ ಸರ್ವೆ ಇದಾಗಿದೆ. ಕೇವಲ ಜನಾಭಿಪ್ರಾಯ ಸಂಗ್ರಹದ ಮೂಲಕ ನಡೆಸಲಾಗಿರುವ ಸರ್ವೇ  ಇದಾಗಿದೆ. ಸುನೀಲ್ ಕನುಗೋಳು ಸರ್ವೆಯಲ್ಲೂ ಕಾಂಗ್ರೆಸ್ ಗೆ 7-8 ಸ್ಥಾನ  ಸಿಗಲಿದೆ ಎಂದು ಗೊತ್ತಾಗಿದೆ.  ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ನಡೆಸಿರುವ ಸರ್ವೇಯಲ್ಲಿ ಗರಿಷ್ಠ 5 ಸ್ಥಾನ  ಸಿಗಲಿದೆ ಎಂದು ಹೇಳಲಾಗುತ್ತಿತ್ತು.  ಅಭ್ಯರ್ಥಿ ಆಯ್ಕೆ ವೇಳೆ ಜಾತಿ ಸಮೀಕರಣದ ಬಗ್ಗೆ  ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.ಸಮರ್ಥ ಅಭ್ಯರ್ಥಿ ಕಣಕ್ಕಿಳಿದರೆ ಮಾತ್ರ 8ಕ್ಕಿಂತ ಅಧಿಕ ಸ್ಥಾನ ಗೆಲ್ಲಬಹುದು  ಎಂದು ಹೇಳಲಾಗ್ತಿದೆ. 

ಇದನ್ನೂ ವೀಕ್ಷಿಸಿ:  Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!