ಜೆಡಿಎಸ್ ಪಂಚರತ್ನ ಯಾತ್ರೆಗೆ ಸಿದ್ದಗೊಳಿಸಿರುವ ವಾಹನಗಳು ಹೇಗಿವೆ ಗೊತ್ತಾ?
ನವೆಂಬರ್ ಒಂದರಂದು ಆರಂಭವಾಗಲಿರುವ ಜೆಡಿಎಸ್ ಪಂಚರತ್ನ ಯಾತ್ರೆಗೆ ವಾಹನಗಳು ಸಿದ್ದವಾಗಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಹನಗಳು ಸಂಚರಿಸಲಿವೆ.
ಬೆಂಗಳೂರು (ಅ.27): ನವೆಂಬರ್ ಒಂದರಂದು ಆರಂಭವಾಗಲಿರುವ ಜೆಡಿಎಸ್ ಪಂಚರತ್ನ ಯಾತ್ರೆಗೆ ವಾಹನಗಳು ಸಿದ್ದವಾಗಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಹನಗಳು ಸಂಚರಿಸಲಿವೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ರೈತರ ಸಮಸ್ಯೆ ಗಳ ಬಗ್ಗೆ ಜೆಡಿಎಸ್ ಜಾರಿ ಮಾಡಲಿರುವ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತ ಸಂಚರಿಸುತ್ತಲಿರುವ ಈ ವಾಹನಗಳ ಜೊತೆ ಕುಮಾರಸ್ವಾಮಿ ಕೂಡಾ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಕೂಡ ಮಾಡಲಿರುವ ಎಚ್ಡಿಕೆ ಒಂದು ಬಾರಿ ಪೂರ್ಣ ಬಹುಮತ ಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡುವ ವಾಗ್ದಾನ ಕೂಡಾ ಮಾಡಲಿದ್ದಾರೆ. ಪಂಚರತ್ನ ವಾಹನಗಳ ವಿನ್ಯಾಸ ಹೇಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ವಾಕ್ ಥ್ರೂ ಮಾಡಿದ್ದಾರೆ ನೋಡೋಣ ಬನ್ನಿ..