ಪ್ರಧಾನಿಯವರು ಗುಜರಾತ್‌ಗೆ ಕೊಡುವ ಪ್ರಾಮುಖ್ಯತೆಯನ್ನು ಕರ್ನಾಟಕಕ್ಕೂ ಕೊಡಲಿ: ಡಿ.ಕೆ. ಸುರೇಶ್‌

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಕಾಂಗ್ರೆಸ್‌ನ ಸಂಸದ ಡಿ.ಕೆ. ಸುರೇಶ್‌ ಮಾತನಾಡಿದ್ದು, ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ಏನ್‌ ಹೇಳಿದ್ದಾರೆ ನೀವೆ ಕೇಳಿ.

Share this Video
  • FB
  • Linkdin
  • Whatsapp

ಸಂಸದ ಡಿ.ಕೆ. ಸುರೇಶ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿ, ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ರಾಜಕೀಯದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇದೇನೆ ಎಂದು ಹೇಳಿದರು. ನನಗೆ ರಾಜಕಾರಣ ಸಾಕಾಗಿದೆ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಬಗ್ಗೆ ಮಾತನಾಡಿದ ಅವರು, ಮೋದಿಯವರು ಗುಜರಾತ್‌, ಉತ್ತರ ಪ್ರದೇಶಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಕರ್ನಾಟಕಕ್ಕೂ ಕೊಡಬೇಕು. ಕೆಲಸ ಚೆನ್ನಾಗಿ ಮಾಡುತ್ತಾರೆ. ಆದ್ರೆ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಮಾಜಿಕ ನ್ಯಾಯ ಕೊಡಿಸುವ ವ್ಯವಸ್ಥೆಯನ್ನು ರೂಪಿಸಿಕೊಂಡು ಕೆಲಸ ಮಾಡಬೇಕಿತ್ತು. ಈ ದೇಶದಲ್ಲಿ ಎಲ್ಲಾ ಜಾತಿ, ಧರ್ಮಗಳು ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡು ಬಂದಿವೆ. ಹಾಗಾಗಿ ಎಲ್ಲಾರನ್ನೂ ಗೌರವಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್‌(DK Suresh) ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಯುವತಿಯರ ಜೊತೆ ರೀಲ್ಸ್ ಮಾಡುವಾಗ್ಲೇ ಕಿಡ್ನ್ಯಾಪ್: ಸ್ಮೈಲಿ ನವೀನ ಕೊಲೆಯಾಗಿದ್ದು ಯಾಕೆ..?

Related Video