ಯುವತಿಯರ ಜೊತೆ ರೀಲ್ಸ್ ಮಾಡುವಾಗ್ಲೇ ಕಿಡ್ನ್ಯಾಪ್: ಸ್ಮೈಲಿ ನವೀನ ಕೊಲೆಯಾಗಿದ್ದು ಯಾಕೆ..?

ಕಿಡ್‌ನ್ಯಾಪ್ ಆದ ಸ್ಮೈಲಿ ನವೀನ ಕೊಲೆಯಾಗಿದ್ದ..!
ಅವನ ಹೆಣ ಹಾಕಲು ಆ ಟೀಂ ಕಾದಿದ್ದು 3 ವರ್ಷ..!
ಆ ಕೊಲೆಗೆ ರಿವೇಂಜ್ ತೀರಿಸಿಕೊಂಡ್ರಾ ಹಂತಕರು..?

Share this Video
  • FB
  • Linkdin
  • Whatsapp

ಅವನು ಟಿಕ್ಟಾಕ್ ಸ್ಟಾರ್.. ಟಿಕ್ ಟಾಕ್ ಹೋಗಿ ರೀಲ್ಸ್ ಬಂದಮೇಲೂ ಸಖತ್ ಫೇಮಸ್ ಆಗಿದ್ದ. ಧೃವ ಸರ್ಜಾರ ಡೈ ಹಾರ್ಡ್ ಫ್ಯಾನ್ ಆಗಿದ್ದ ಆತ ಸಾಮಾಜಿಕ ಕಳಕಳಿಯ ವಿಡಿಯೋಗಳನ್ನ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದ ಆತ ರೀಲ್ಸ್(Reels) ಮಾಡುವಾಗ್ಲೇ ಕಿಡ್ನ್ಯಾಪ್ ಆಗಿದ್ದ. ಯಾರು ಕಿಡ್ನ್ಯಾಪ್(Kidnap) ಮಾಡಿದ್ದು ಅಂತ ಯೋಚಿಸುತ್ತಿರುವಾಗ್ಲೇ ಅವನ ಮೃತದೇಹ ಸಿಕ್ಕಿತ್ತು. ಹಂತಕರು ಆ ಟಿಕ್‌ಟಾಕ್‌ ಸ್ಟಾರ್‌ನ ಬರ್ಬರವಾಗಿ ಕೊಲೆ ಮಾಡಿ ಹೋಗಿದ್ರು. ಸಾಮಾಜಿಕ ಕಳಕಳಿಯ ವಿಡಿಯೋಗಳನ್ನ ಮಾಡ್ತಿದ್ದ ಈ ಸ್ಮೈಲಿ ನವೀನ ಇವತ್ತು ಶಿವನ ಪಾದ ಸೇರಿದ್ದಾನೆ. ಸ್ಮೈಲಿ ನವೀನ್ ಅನ್ನುವ ಹೆಸರಿನಿಂದ ಫೇಮಸ್ ಆಗಿದ್ದ ಇವನು ಬೆಂಗಳೂರು ನಗರದ ಯಲಚನಹಳ್ಳಿ ಬಳಿಯ ಹರಿನಗರ ನಿವಾಸಿ. 27 ವರ್ಷದ ನವೀನ್ ಅರ್ಧಂಬರ್ಧ ಓದು ನಿಲ್ಲಿಸಿ, ಬೆಂಗಳೂರಿನಲ್ಲಿ(Bengaluru) ಅದು ಇದು ಕೆಲಸ ಮಾಡಿಕೊಂಡಿದ್ದ. ಟಿಕ್ ಟಾಕ್(tiktok) ಕಾಲದಲ್ಲಿ ಕಂಡ ಕಂಡ ವಿಚಾರಕ್ಕೆ ವಿಡಿಯೋ ಮಾಡಿ ಸಾಕಷ್ಟು ಫೇಮಸ್ ಆಗಿದ್ದ. ಇಂಥಹ ಸ್ಮೈಲಿ ನವೀನ ಮೊನ್ನೆ ಅಂದ್ರೆ 28ನೇ ತಾರಿಖು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.. ಹಂತಕರು ಮೊದಲು ಅವನಿಗೆ ಚೆನ್ನಾಗಿ ಹೊಡೆದು ನಂತರ ತಲೆ ಬುರಡೆಯನ್ನೆಲ್ಲಾ ಜಜ್ಜಿ, ಆತ ಸತ್ತ ನಂತರ ಅವನ ದೇಹಕ್ಕೆ ಬೆಂಕಿ ಕೂಡ ಇಟ್ಟು ಎಸ್ಕೇಪ್ ಆಗಿದ್ದಾರೆ. 

ಇದನ್ನೂ ವೀಕ್ಷಿಸಿ: ಅವಧಿಗೂ ಮುನ್ನವೇ ನಡೆಯುತ್ತಾ ಲೋಕಸಭೆ ಎಲೆಕ್ಷನ್ ? 5 ದಿನಗಳ ಅಧಿವೇಶನ, ರಾಜಕೀಯ ಲೆಕ್ಕಾಚಾರ ಬದಲಿಸುತ್ತಾ?

Related Video