ಸಂಚಲನ ಸೃಷ್ಟಿಸಿದೆ ಡಿ.ಕೆ. ಸುರೇಶ್ ವೈರಾಗ್ಯದ ಹೇಳಿಕೆ: ಲೋಕಸಭೆ ಸನಿಹದಲ್ಲೇ ಕಾಂಗ್ರೆಸ್‌ಗೆ ಶಾಕ್ !

ಡಿಕೆ ಸುರೇಶ್ ಬೇಜಾರಿಗೆ ಕಾರಣವಾಯ್ತಾ ಮಿಸ್ ಆದ ಪಟ್ಟ ?
ಸಂಚಲನ ಸೃಷ್ಟಿಸಿದೆ ಡಿ.ಕೆ. ಸುರೇಶ್ ವೈರಾಗ್ಯದ ಹೇಳಿಕೆ
ಮಹದೇವಪ್ಪ,ಎಂಬಿ ಪಾಟೀಲ್ ಹೇಳಿಕೆಗೆ ಡಿಕೆಸು ಮುನಿಸು?

Share this Video
  • FB
  • Linkdin
  • Whatsapp

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ರಾಜ್ಯ ಕಾಂಗ್ರೆಸ್ಸಿನ ಏಕೈಕ ಸಂಸದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ರಾಜಕೀಯ ವೈರಾಗ್ಯದ ಮಾತನ್ನಾಡಿದ್ದಾರೆ. ಇನ್ನೇನು ಒಂದೇ ವರ್ಷದ ಒಳಗೆ ಲೋಕಸಭಾ ಚುನಾವಣೆ ಬರಲಿದೆ. ಈ ಹೊತ್ತಲ್ಲಿ ಸುರೇಶ್ ಅವರು ಆಡಿದ ರಾಜಕೀಯ ವೈರಾಗ್ಯದ ಮಾತು ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ.ಪಕ್ಷದೊಳಗೆ ಅನೇಕ ನಾಯಕರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸ್ತಾ ಇರೋದು ಒಂದು ಕಡೆ ಆದ್ರೆ, ಡಿಕೆ ಶಿವಕುಮಾರ್ ಸಿಎಂ ಆಗಲಿ ಅನ್ನುತ್ತಿರೋರು ಇನ್ನೊಂದು ಕಡೆ.ಇದಕ್ಕಾಗಿಯೇ ವಿಶೇಷ ಪೂಜೆಯೂ ಆಗಿದ್ದು ಅನೇಕ ಪ್ರಶ್ನೆಗಳನ್ನ ಹುಟ್ಟಿ ಹಾಕಿದೆ. ಇದೀಗ ಡಿಕೆ ಸುರೇಶ್ ಅವರ ವೈರಾಗ್ಯದ ಹೇಳಿಕೆಗೆ ಬಿಜೆಪಿ ವ್ಯಂಗ್ಯ ಮಾಡಿದೆ.

ಇದನ್ನೂ ವೀಕ್ಷಿಸಿ: ಉಭಯ ನಾಯಕರ ನಡುವೆ ಟ್ವೀಟ್ ವಾರ್‌: ವೆಲ್‌ ಡನ್‌ ಎಂ.ಬಿ. ಪಾಟೀಲ್‌ ಸರ್‌ ಎಂದ ಬಿ.ಎಲ್‌. ಸಂತೋಷ್‌ !

Related Video