ಉಭಯ ನಾಯಕರ ನಡುವೆ ಟ್ವೀಟ್ ವಾರ್‌: ವೆಲ್‌ ಡನ್‌ ಎಂ.ಬಿ. ಪಾಟೀಲ್‌ ಸರ್‌ ಎಂದ ಬಿ.ಎಲ್‌. ಸಂತೋಷ್‌ !

ಉದ್ಯಮಿ ಅದಾನಿ ಹೂಡಿಕೆ ಪರ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದು,ಇದನ್ನು ಬಿ.ಎಲ್.ಸಂತೋಷ್ ಅವರು ಟ್ವೀಟ್‌ ಮೂಲಕ ಟೀಕಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನಡುವೆ ಟ್ವೀಟ್‌ ವಾರ್‌ ನಡೆದಿದೆ. ರಾಜ್ಯದಲ್ಲಿ ಅದಾನಿ ಗ್ರೂಪ್ ಹೂಡಿಕೆಗೆ ಮುಕ್ತ ಅವಕಾಶ ನೀಡುವುದಾಗಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದನ್ನು ಬಿ.ಎಲ್.ಸಂತೋಷ್ ಶ್ಲಾಘಿಸಿದ್ದಾರೆ. ಅಲ್ಲದೇ ರಾಹುಲ್‌ ಗಾಂಧಿಗೆ ಅವರ ಸ್ಥಾನವನ್ನು ತೋರಿಸಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದಾನಿ ವಿರುದ್ಧ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ಉದ್ಯಮಿ ಅದಾನಿ ಹೂಡಿಕೆ ಪರವಾಗಿ ಮಾತನಾಡಿರುವ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ರಾಜ್ಯದ ನೂತನ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬ: ರೇಸ್‌ನಲ್ಲಿ ಹಲವರು, ಯಾರಾಗ್ತಾರೆ ನಾಯಕ ?

Related Video