ಸಿದ್ದು-ಡಿಕೆ ಒಗ್ಗಟ್ಟು, ಮೋದಿ ವಿರುದ್ಧ ರೈತ ಹೋರಾಟದ ಅಸ್ತ್ರ, ದೆಹಲಿಯಲ್ಲೂ ಮೊಳಗುತ್ತಾ 'ಕೈ' ಕಹಳೆ.?
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಅಸಮಾಧಾನವಿದ್ದು, ಇಬ್ಬರ ನಡುವೆ ಅಷ್ಟಕ್ಕಷ್ಟೇ ಎಂದು ಕಾಂಗ್ರೆಸ್ ಪಾಳಯದಿಂದಲೇ ಮಾತು ಕೇಳಿ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಕೆಲವು ಬೆಳವಣಿಗೆಗಳು ನಡೆದವು.
ಬೆಂಗಳೂರು (ಜ. 21): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಅಸಮಾಧಾನವಿದ್ದು, ಇಬ್ಬರ ನಡುವೆ ಅಷ್ಟಕ್ಕಷ್ಟೇ ಎಂದು ಕಾಂಗ್ರೆಸ್ ಪಾಳಯದಿಂದಲೇ ಮಾತು ಕೇಳಿ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಕೆಲವು ಬೆಳವಣಿಗೆಗಳು ನಡೆದವು. ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಹೋರಾಟದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮುನಿಸು ಮರೆತು ಒಂದಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೈಡೆನ್ -ಕಮಲಾ ಯುಗಾರಂಭ, ಭಾರತೀಯ ಟೆಕ್ಕಿಗಳಿಗೆ ಪೌರತ್ವ ಗಿಫ್ಟ್..!
62 ಕೋಟಿ ಭಾರತೀಯ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಗೆ ತಂದಿರುವ 3 ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಂಧನ ತೈಲ, ವಿದ್ಯುತ್ ದರ ಇಳಿಕೆ ಮಾಡಬೇಕು. ರೈತರ ಹೋರಾಟವನ್ನು ಬಲ ಪ್ರಯೋಗದಿಂದ ಹತ್ತಿಕ್ಕದೆ ರೈತರ ಮೇಲೆ ದಾಖಲಿಸಿರುವ 12 ಸಾವಿರಕ್ಕೂ ಹೆಚ್ಚು ಎಫ್‌ಐಆರ್ ರದ್ದುಪಡಿಸಬೇಕು ಎಂದು ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.