ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಯಡವಟ್ಟು ಮಾಡಿಕೊಂಡ ಡಿಕೆಶಿ, ಜಮೀರ್ ಅಹ್ಮದ್

ಇಂದು ಆ.15 ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ  75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ.  ಹಾಗೇ  ಶಾಸಕ ಜಮೀರ್ ಅಹ್ಮದ್ ಖಾನ್ ಸಹ ಯಡವಟ್ಟುಮಾಡಿಕೊಂಡಿರುವ ಪ್ರಸಂಗ ಜರುಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.15): ಇಂದು ಆ.15 ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಯಡವಟ್ಟು ಮಾಡಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡುವಾಗ, ದೇಶಕ್ಕಾಗಿ ಹುತಾತ್ಮ ಸೋನಿಯಾ ಗಾಂಧಿಯವರ ಕೊಡುಗೆ ಅಪಾರ ಎಂದು ಹೇಳುವ ಮೂಲಕ ಯಡವಟ್ಟು ಮಾಡಿಕೊಂಡರು.

75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆ ಹಾಡಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು!

ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿತಪ್ಪಿ ಹೇಳಿ ನಂತರ ಸಾರಿ, ಸಾರಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದರು. ಇನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಸಹ ಬಾಯಿತಪ್ಪಿರುವ ಪ್ರಸಂಗ ಜರುಗಿದೆ.

Related Video