DK Shivakumar: ಚುನಾವಣೆ ಬಳಿಕ ಡಿಕೆಶಿಗೆ ಡಿಸಿಎಂ, ಅಧ್ಯಕ್ಷ ಸ್ಥಾನ ಹೋಗುತ್ತಾ? ಡಿ.ಕೆ. ಶಿವಕುಮಾರ್‌ಗೆ ಸಿಗುತ್ತಾ ಸಿಎಂ ಸ್ಥಾನ?

ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಎಂ, ಡಿಸಿಎಂ ಮಾತು
ಮೊನ್ನೆ ಸಿಎಂ ಒಂದು ಮಾತು.. ನಿನ್ನೆ ಡಿಸಿಎಂ ಮತ್ತೊಂದು ಮಾತು!
60 ಸಾವಿರ ಲೀಡ್ ಕೊಟ್ರೆ ಯಾರೂ ಮುಟ್ಟೋಕಾಗಲ್ಲ ಎಂದಿದ್ದ ಸಿಎಂ

First Published Apr 6, 2024, 10:59 AM IST | Last Updated Apr 6, 2024, 10:59 AM IST

ಲೋಕ ಸಮರದ ಹೊತ್ತಲ್ಲಿ ಕಾಂಗ್ರೆಸ್‌ನಲ್ಲಿ ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಸಿಎಂ ಸಿದ್ದರಾಮಯ್ಯ(CM Siddaramaiah) ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಹೇಳಿಕೆಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಡಿಕೆಶಿ ಹೇಳಿಕೆಯೊಂದು ಚುನಾವಣೆ ಬಳಿಕ ಅವರ ಡಿಸಿಎಂ, ಅಧ್ಯಕ್ಷ ಸ್ಥಾನ ಹೋಗುತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೇ ಲೋಕಸಭೆ(Loksabha) ಬಳಿಕ ಡಿ.ಕೆ ಶಿವಕುಮಾರ್‌ಗೆ  ಸಿಎಂ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ. ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು. ವಿಸಿಟ್ ಕಾರ್ಡ್ ಇಟ್ಕೊಂಡು ಓಡಾಡಿದ್ರೆ ನೀವು ಮಾಜಿ ಆಗ್ತೀರಾ. ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಸ್ಥಾನ ಹೋಗುತ್ತೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಸ್ಥಾನದಲ್ಲಿ ನಾನು ಎಷ್ಟು ದಿನ ಇರ್ತಿನೋ ಅನ್ನೊದು ಮುಖ್ಯವಲ್ಲ. ನಿಮಗೆ ಕೊಟ್ಟ ಕೆಲಸ ಮಾಡಬೇಕು.. ಪಕ್ಷಕ್ಕಾಗಿ ದುಡಿಬೇಕು ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Cholera: ರಾಜ್ಯದ ಜನರಿಗೆ ಶುರುವಾಯ್ತಾ ಕಾಲರಾ ಭೀತಿ ? ಬಾಲಕಿಯರ ಹಾಸ್ಟೆಲ್‌ನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆ ?