Cholera: ರಾಜ್ಯದ ಜನರಿಗೆ ಶುರುವಾಯ್ತಾ ಕಾಲರಾ ಭೀತಿ ? ಬಾಲಕಿಯರ ಹಾಸ್ಟೆಲ್‌ನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆ ?

ಬಿಎಂಸಿಆರ್‌ಐ ಬಾಲಕಿಯರ ಹಾಸ್ಟೆಲ್‌ನಲ್ಲಿನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆಯಾಗಿದೆ ಎನ್ನಲಾಗ್ತಿದೆ. ವಿದ್ಯಾರ್ಥಿನಿಯರ ಬ್ಲಡ್ ಟೆಸ್ಟ್‌ನನ್ನು ಲ್ಯಾಬ್‌ಗೆ ರವಾನೆ ಮಾಡಲಾಗಿದೆ.
 

First Published Apr 6, 2024, 10:42 AM IST | Last Updated Apr 6, 2024, 10:42 AM IST

ರಾಜ್ಯದ ಜನತೆಗೆ ಇದೀಗ ಕಾಲರಾ ಆತಂಕ ಶುರುವಾಗಿದ್ದು, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ನಲ್ಲಿ ಕಾಲರಾ(Cholera) ಸ್ಫೋಟವಾಗಿದೆ. ಬಿಎಂಸಿಆರ್‌ಐ ಬಾಲಕಿಯರ ಹಾಸ್ಟೆಲ್‌ನಲ್ಲಿ 47 ವಿದ್ಯಾರ್ಥಿಗಳಲ್ಲಿ(Hostel Students) ಕಾಲರಾ ಪತ್ತೆಯಾಗಿದೆ ಎನ್ನಲಾಗ್ತಿದೆ. ಎಲ್ಲಾ ವಿದ್ಯಾರ್ಥಿನಿಯರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. 47 ಹಾಸ್ಟೆಲ್ ವಿದ್ಯಾರ್ಥಿನಿಯರ ಬ್ಲಡ್ ಟೆಸ್ಟ್‌ನನ್ನು ಲ್ಯಾಬ್‌ಗೆ(Lab) ರವಾನೆ ಮಾಡಲಾಗಿದೆ. ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ಸೋಮವಾರ ಅರೋಗ್ಯ ಇಲಾಖೆ(Health Department) ಕೈ ಸೇರಲಿರುವ ಕಾಲರಾ ವರದಿ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ 6 ಮಂದಿಗೆ ಸೋಂಕು ಪತ್ತೆಯಾಗಿದೆ. ರಕ್ತ ಪರೀಕ್ಷೆಯಲ್ಲಿ ಕಾಲರಾ ಧೃಡ ಪಟ್ಟಿದ್ದು, ಕಲ್ಚರ್ ರಿಪೋರ್ಟ್ 3 ದಿನದಲ್ಲಿ ಬರುವ ಸಾಧ್ಯತೆ. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ 47 ವೈದ್ಯಕೀಯ ವಿದ್ಯಾರ್ಥಿಗಳು ದಾಖಲಾಗಿದ್ದರು.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಕಲಹದಿಂದ ದೂರವಿರಿ..ಯಾವುದೇ ಸಾಲ ಮಾಡಬೇಡಿ