ರಾಮನಗರ ರಣರಂಗದಲ್ಲಿ ದಳಪತಿಗೆ ಡಿಕೆ ಚೆಕ್‌ಮೇಟ್..! ಬೆಂಗಳೂರು ದಕ್ಷಿಣ ಆಗಲಿದೆಯಾ ರಾಮನಗರ ?

ಜಿಲ್ಲೆಯ ಹೆಸರು ಬದಲಾವಣೆಯ ಹಿಂದಿದ್ಯಾ ಕೋಟೆ ಗೆಲ್ಲುವ ತಂತ್ರ..?
ಎಚ್‌ಡಿಕೆ ಘೋಷಿಸಿದ್ದ ಜಿಲ್ಲೆಯ ಹೆಸರು ಬದಲಿಸಲು ಮುಂದಾದ ಡಿಕೆ..!
ದಳಪತಿ ಜೊತೆ ಸಂಘರ್ಷಕ್ಕೆ ಮತ್ತೊಂದು ಮುನ್ನುಡಿ ಬರೆದರಾ ಬಂಡೆ..?

First Published Jul 10, 2024, 5:06 PM IST | Last Updated Jul 10, 2024, 5:06 PM IST

ದಳಪತಿ ಕಟ್ಟಿದ್ದ ಕೋಟೆಯ ಹೆಸರನ್ನೇ ಬದಲಿಸಲು ಮುಂದಾದ್ರು ಕನಕಪುರ ಬಂಡೆ. ರಾಮನಗರ (Ramanagara) ರಣರಂಗದಲ್ಲಿ ಮತ್ತೆ ಶುರುವಾಗಲಿದೆ ಮಹಾ ಪೈಲ್ವಾನರ ಮಲ್ಲಯುದ್ಧ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ(Bengaluru South) ಜಿಲ್ಲೆಯನ್ನಾಗಿ ಬದಲಿಸಲು ಡಿಸಿಎಂ ಡಿಕೆಶಿ ಪ್ಲಾನ್. ಇದು ರಾಮನಗರ ಜಿಲ್ಲೆಯಿಂದ ಕನಕಪುರದ(Kanakapura) ರಣಬೇಟೆಗಾರನ ಬತ್ತಳಿಕೆಯಿಂದ ನುಗ್ಗಿ ಬಂದಿರೋ ಅಸ್ತ್ರ, ರಾಮಾಸ್ತ್ರ. ರಾಮನಗರ ಅಂದ್ರೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ್ರು (Devegowda) ಮತ್ತು ಕನಕಪುರ ಬಂಡೆ ನಡುವಿನ ರೋಚಕ ರಾಜಕೀಯ ಜಿದ್ದಾಜಿದ್ದಿಯ ರಣರಂಗ. ರಾಮನಗರ ಅಂದ್ರೆ ದಳಪತಿ ಕುಮಾರಸ್ವಾಮಿ(HD Kumaraswamy) ಮತ್ತು ಕಾಂಗ್ರೆಸ್(Congress) ಸಾರಥಿ ಡಿಕೆ ಶಿವಕುಮಾರ್ ಅವರ ರಾಜಕೀಯ ರಣಕಾಳಗದ ರಣಾಂಗಣ. ರಾಮನಗರ ಅಂದ್ರೆ ಇದು. ಅಲ್ಲಿ ನಡೆಯೋ ರಾಜಕೀಯ ಕುಸ್ತಿ-ಜಂಗೀಕುಸ್ತಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡತ್ತೆ. ರಾಮನಗರ ರಣರಂಗದಲ್ಲಿ ನಡೆಯೋ ಮಲ್ಲಯುದ್ಧ ಯಾವ ಕುರುಕ್ಷೇತ್ರ ಯುದ್ಧವನ್ನೇ ನಾಚಿಸಿ ಬಿಡತ್ತೆ. ಯಾಕಂದ್ರೆ, ಅಲ್ಲಿ ನಡೆಯೋದು ಬರೀ ಯುದ್ಧವಲ್ಲ, ದ್ವೇಷ, ದುಷ್ಮನಿಯನ್ನೇ ಹೊದ್ದು ಮಲಗಿರೋ ಅಗ್ನಿ ತಾಂಡವ.. ಅದು ಆಗಾಗ ಜ್ವಾಲಾಮುಖಿಯಂತೆ ಸ್ಫೋಟಗೊಳ್ತಾನೇ ಇರತ್ತೆ. ಇಂಥಾ ರಾಮನಗರ ಜಿಲ್ಲೆಯನ್ನೇ ರಾಜಕೀಯ ಕರ್ಮಭೂಮಿ ಮಾಡಿಕೊಂಡು, ಮದ್ದಾನೆಗಳಂತೆ ಗುದ್ದಾಡುತ್ತಾ ರಾಜಕಾರಣ ಮಾಡ್ತಾ ಬಂದವರು ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ. ಪ್ರಪಂಚದ ಭೂಪಟದಲ್ಲಿ ರಾಮನಗರ ಜಿಲ್ಲೆ ಇದೆ ಅಂದ್ರೆ ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ. ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದದ್ದೇ ಕುಮಾರಸ್ವಾಮಿಯವರ ಕಾರಣದಿಂದ. 2007ರಲ್ಲಿ ಎಚ್.ಡಿ.ಕೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ರಾಮನಗರ ಜಿಲ್ಲೆಯನ್ನು ಘೋಷಣೆ ಮಾಡಿದ್ರು.

ಇದನ್ನೂ ವೀಕ್ಷಿಸಿ:  Murder News: ಇವನದ್ದು ಕೇಕ್..ಬರ್ತ್‌ ಡೇ ಮತ್ತೊಬ್ಬನ ಜೊತೆಗೆ..! ಅವಳನ್ನ ಕೊಂದು ಪ್ರಪಾತಕ್ಕೆ ಬಿಸಾಡಿದ..!