ಒಕ್ಕಲಿಗ ನಾಯಕರ ನಡುವೆ ಕನಕಪುರ ವಾರ್: ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಡಿಕೆಶಿ ಉಲ್ಟಾ ಹೊಡೆದಿದ್ದೇಕೆ..?
ಡಿಕೆಶಿ ನಡೆಯಿಂದ ಸಿಟ್ಟಿಗೆದ್ದಿರುವ ಮಾಜಿ ಸಿಎಂ ಹೆಚ್‌ಡಿಕೆ
ಡಿಕೆಶಿ ವಿರುದ್ಧ ಸರಣಿ ಟ್ವೀಟ್ ಮೂಲಕ ಎಚ್ಡಿಕೆ ಆಕ್ರೋಶ
ಡಿಸಿಎಂ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ನಲ್ಲೂ ಭಾರೀ ವಿರೋಧ
ರಾಜ್ಯ ರಾಜಕಾರಣದಲ್ಲಿ ಕನಕಪುರ ವಾರ್ ಭುಗಿಲೆದ್ದಿದೆ. ಒಕ್ಕಲಿಗ ನಾಯಕರ ನಡುವೆ ಕನಕಪುರ ರಣಾಂಗಣ ಶುರುವಾಗಿದ್ದು, ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar ) ಹೇಳಿದ್ದಾರೆ. ಡಿಕೆಶಿ ನಡೆಯಿಂದ ಸಿಟ್ಟಿಗೆದ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy), ಅವರ ವಿರುದ್ಧ ಸರಣಿ ಟ್ವೀಟ್ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಡಿಸಿಎಂ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ನಲ್ಲೂ(Congress) ಭಾರೀ ವಿರೋಧ ವ್ಯಕ್ತವಾಗಿದೆ. ಇದೀಗ ತಮ್ಮ ಹೇಳಿಕೆಯಿಂದ ಡಿಸಿಎಂ ಡಿಕೆಶಿ ಯೂಟರ್ನ್ ಹೊಡೆದಿದ್ದು, ಇದ್ದಕ್ಕಿದ್ದಂತೆ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. ಕನಕಪುರವನ್ನು(Kanakapur) ಬೆಂಗಳೂರಿಗೆ(Bengaluru) ಸೇರಿಸುವ ಉದ್ದೇಶವಿಲ್ಲ. ಕನಕಪುರ , ರಾಮನಗರ, ಚನ್ನಪಟ್ಟಣ ಬಾಂಡಿಂಗ್ ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಮೈಸೂರು ಪ್ರವಾಸ ವಂಚಿತ ಶಾಸಕರನ್ನು ದುಬೈಗೆ ಕರೆದೊಯ್ಯುತ್ತಾರಾ ಸತೀಶ್ ಜಾರಕಿಹೊಳಿ..?