ಕುಮಾರಸ್ವಾಮಿ V/S ಡಿಕೆಶಿ ಮಧ್ಯೆ ನಿಲ್ಲದ ಮಾತಿನ ಸಮರ! ನನ್ನ ಜಮೀನಿನ ಬಂಡೆ ಒಡೆದು ಬದುಕಿದ್ದೇನೆಂದ ಡಿಸಿಎಂ!

ಹೆಚ್‌ಡಿಕೆ ಈವರೆಗೆ ಏನೇ ಆರೋಪ ಮಾಡಿದರೂ ಸಹ ಸಮುದಾಯಕ್ಕಾಗಿ ಗೌರವ ಕೊಟ್ಟಿದ್ದೆ. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ತುಂಬಾ ಗೌರವ ಕೊಡ್ತೀನಿ, ಹಿರಿಯರಿಗೆ ಗೌರವ ಕೊಡುವುದನ್ನ ಸ್ವೀಕರಿಸಬೇಕು, ರಾಜಕಾರಣದಲ್ಲಿ ಯಾವುದು ಶಾಶ್ವತ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. 

First Published Apr 16, 2024, 12:35 PM IST | Last Updated Apr 17, 2024, 10:37 AM IST

ಲೋಕಸಭಾ ಚುನಾವಣೆ (Loksabha Eection 2024) ಸಂಬಂಧ ಪ್ರಚಾರ ಜೋರಾಗಿದ್ದು, ರಾಜಕೀಯ ಮುಖಂಡರು ಸಮರಕ್ಕೆ ಸಜ್ಜಾಗಿದ್ದಾರೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ (Former CM Kumaraswamy) ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ (DCM DK Sivakumar) ಮಧ್ಯೆ ಮಾತಿನ ಯುದ್ಧ ಜೋರಾಗಿದೆ. ಬಂಡೆ, ಕಲ್ಲು ಹೊಡೆದ ಅನ್ನೋದು ಸರಿಯಲ್ಲ, ನಮ್ಮಂತವರನ್ನ ಕಳೆದುಕೊಳ್ಳೋದು ಎಂದರೆ ನನ್ನ ಕಳೆದುಕೊಂಡಂತೆ ಅಲ್ಲ. ಇಡೀ ಸಮುದಾಯವನ್ನ ಕಳೆದುಕೊಂಡಂತೆ ಎಂದು ಡಿಕೆಶಿ ಕಿಡಿಕಾರಿದ್ದಾರೆ. ಹಾಗೆಯೇ ಹೆಚ್‌ಡಿಕೆ ಈವರೆಗೆ ಏನೇ ಆರೋಪ ಮಾಡಿದರೂ ಸಹ ಸಮುದಾಯಕ್ಕಾಗಿ ಗೌರವ ಕೊಟ್ಟಿದ್ದೆ. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ತುಂಬಾ ಗೌರವ ಕೊಡ್ತೀನಿ, ಹಿರಿಯರಿಗೆ ಗೌರವ ಕೊಡುವುದನ್ನ ಸ್ವೀಕರಿಸಬೇಕು, ರಾಜಕಾರಣದಲ್ಲಿ ಯಾವುದು ಶಾಶ್ವತ ಅಲ್ಲ ಎಂದಿದ್ದಾರೆ. ಹಾಗೆಯೇ ಹೆಚ್‌ಡಿಕೆ ಮಾಡಿದ ಆರೋಪಕ್ಕೆ ತಿರುಗೇಟು ನೀಡಿ, ನನ್ನ ಆಸ್ತಿ, ನನ್ನ ಬಂಡೆ ಅದೆಲ್ಲ ಕುಮಾರಸ್ವಾಮಿಗೇಕೆ?, ನನ್ನ ಜಮೀನಿನ ಬಂಡೆ ಒಡೆದು ಬದುಕಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಮೊಮ್ಮಗನ ಗೆಲುವಿಗೆ ಪಣತೊಟ್ಟ ದೊಡ್ಡಗೌಡರು: 13ನೇ ದಿನದ ಪ್ರಚಾರಕ್ಕೆ ಮುಂದಾದ ಹೆಚ್‌ಡಿಡಿ!

Video Top Stories