Asianet Suvarna News Asianet Suvarna News

ಮೊಮ್ಮಗನ ಗೆಲುವಿಗೆ ಪಣತೊಟ್ಟ ದೊಡ್ಡಗೌಡರು: 13ನೇ ದಿನದ ಪ್ರಚಾರಕ್ಕೆ ಮುಂದಾದ ಹೆಚ್‌ಡಿಡಿ!

ಚುನಾವಣೆ ಘೋಷಣೆ ಆದ ನಂತರದಿಂದ ಈವರೆಗೆ ಬರೋಬ್ಬರಿ 12 ದಿನ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ಪ್ರಚಾರ ಕಾರ್ಯ ಮಾಡಿದ್ದು, ಇಂದು 13ನೇ ದಿನದ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಮೂಲಕ ಮೊಮ್ಮಗನ ಗೆಲುವಿಗೆ ದೊಡ್ಡ ಗೌಡರು ಪಣ ತೊಟ್ಟಿದ್ದಾರೆ. 
 

ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆ ಹಾಸನ ಕ್ಷೇತ್ರವನ್ನು ಹೆಚ್‌ ಡಿ ದೇವೇಗೌಡ (HD Devegowda) ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಮೊಮ್ಮಗನ ಗೆಲುವಿಗೆ ದೇವೇಗೌಡರು ಪಣತೊಟ್ಟಿದ್ದಾರೆ. ಚುನಾವಣೆ ಘೋಷಣೆ ಆದ ನಂತರದಿಂದ ಈವರೆಗೆ ಬರೋಬ್ಬರಿ 12 ದಿನ ಹೆಚ್‌ಡಿಡಿ ಪ್ರಚಾರ ಕಾರ್ಯ ಮಾಡಿದ್ದಾರೆ. ಇಂದು 13 ನೇ ದಿನದ ಪ್ರಚಾರಕ್ಕೆ ಮುಂದಾಗಿದ್ದು, ಹುಟ್ಟೂರು ಹರದನಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ನಡುವೆ ಹಾಸನದಲ್ಲಿ(Hassan) ಶ್ರೇಯಸ್ ಗೆಲ್ಲಿಸುತ್ತೇವೆ ಎಂದು ಸಿಎಂ, ಡಿಸಿಎಂ ಪಣ ತೊಟ್ಟಿದ್ದರಿಂದಾಗಿ ದೇವೇಗೌಡರು ಹಳ್ಳಿ, ಹೋಬಳಿ, ಪಂಚಾಯ್ತಿಗಳಲ್ಲೂ ತಮ್ಮ ಮೊಮ್ಮಗನ ಪ್ರಚಾರ ಮಾಡಲಿದ್ದಾರೆ. ಇದರ ಜೊತೆಗೆ ಪ್ರಜ್ವಲ್(Prajwal Revanna) ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿದ್ದು, ಪ್ರತಿ ಸಭೆಗಳಲ್ಲೂ ನಾನು ತಪ್ಪು ಮಾಡಿದ್ರೆ ಕ್ಷಮಿಸಿ, ನೀವೆಲ್ಲಾ ದೊಡ್ಡವರು ಅಂತ ಕ್ಷಮೆಯಾಚನೆ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Narendra Modi: ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ?

Video Top Stories