ಕರ್ಮಭೂಮಿಯಲ್ಲಿ ಬಂಡೆ ಬಾಯಲ್ಲಿ ಸಿಎಂ ಕುರ್ಚಿ ಜಪ : ಕುರ್ಚಿ ಕಾಳಗದಲ್ಲಿ ಕದನ ವಿರಾಮ, ಮುಂದೆ ಕಾದಿದ್ಯಾ ಹೊಸ ಆಟ..?

ಎಲ್ಲಿಗೆ ಬಂತು ಕನಕಪುರದ ಛಲಗಾರನ “ಪಟ್ಟ” ಯಜ್ಞ..?
ಅವಕಾಶಕ್ಕಾಗಿ ಕಾದು ಕೂತಿರೋ ಡಿಕೆಶಿಗೆ ಕಾದಿದ್ಯಾ ಅಚ್ಚರಿ..?
ಸಿಎಂ ಕನಸು ಹೊತ್ತೇ ಕುರುಕ್ಷೇತ್ರದ ಅಖಾಡಕ್ಕಿಳಿದಿದ್ದರು ಡಿಕೆಶಿ
 

Share this Video
  • FB
  • Linkdin
  • Whatsapp

ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ... ಕನಕಪುರ ಬಂಡೆಯ ಮುಂದಿನ ಟಾರ್ಗೆಟ್ ಮುಖ್ಯಮಂತ್ರಿ ಪಟ್ಟ. ಪಟ್ಟಕಾಳಗದಲ್ಲಿ ಸಿದ್ದರಾಮಯ್ಯನವರ ಪಟ್ಟಿನ ಮುಂದೆ ಸೋತಿರುವ ಡಿಕೆಶಿ, ಸದ್ಯಕ್ಕೆ ಕದನವಿರಾಮ ಘೋಷಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕನಕಪುರ ಛಲಗಾರನ ಕನಸು ಮಾತ್ರ ಕಮರಿಲ್ಲ. ಹುಟ್ಟೂರ ಜನರ ಮುಂದೆಯೇ ಮುಖ್ಯಮಂತ್ರಿ ಪಟ್ಟದ ಗುಟ್ಟನ್ನು ಡಿಕೆ ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ಮನೆದೇವತೆ ಕಬ್ಬಾಳಮ್ಮ ದೇವಿಯ ಮುಂದೆ 101 ತೆಂಗಿನಕಾಯಿಗಳನ್ನು ಒಡೆದು ಹರಕೆ ತೀರಿಸಿದ ಡಿಕೆ ಶಿವಕುಮಾರ್‌, ಕನಕಪುರ ಕ್ಷೇತ್ರದಿಂದ ದಾಖಲೆಯ ಅಂತರದಲ್ಲಿ ಗೆಲ್ಲಿಸಿದ್ದಕ್ಕಾಗಿ ಮನೆದೇವತೆಗೆ ಹರಕೆ ತೀರಿಸಿದ್ದಾರೆ. ಗೆದ್ದದ್ದೂ ಆಯ್ತು, ಡಿಸಿಎಂ ಆಗಿದ್ದೂ ಆಯ್ತು. ಈಗ ಡಿ.ಕೆ. ಶಿವಕುಮಾರ್ ಅವರ ಮುಂದಿನ ಟಾರ್ಗೆಟ್ ಮುಖ್ಯಮಂತ್ರಿ ಪಟ್ಟವಾಗಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ: ಸೀಳುನಾಯಿ, ಹುಲಿ, ಆನೆ ಜೂಟಾಟಕ್ಕೆ ನಾಗರಹೊಳೆ ಸಾಕ್ಷಿ: ಪ್ರವಾಸಿಗರ ಮೊಬೈಲ್‌ನಲ್ಲಿ ದೃಶ್ಯ ಸೆರೆ

Related Video