ಬಿಜೆಪಿ ವಿರುದ್ಧ ನಾವು ತಂತ್ರಗಾರಿಕೆ ಹೆಣೆಯುತ್ತೇವೆ: ಡಿಕೆಶಿ

ಬಿಜೆಪಿ ದೂರು ನೀಡುವ ಮಾಹಿತಿ ಸಿಗುತ್ತಿದ್ದಂತೆ ಡಿಕೆಶಿ ಅಲರ್ಟ್‌
ಡಿಕೆಶಿ ನಾಮಪತ್ರ ತಿರಸ್ಕಾರಕ್ಕೆ ದೂರು ಕೊಡುತ್ತಾ ಬಿಜೆಪಿ?
ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ್ರಾ ಡಿಕೆ ಶಿವಕುಮಾರ್‌ ?

Share this Video
  • FB
  • Linkdin
  • Whatsapp

ರಾಮನಗರ: ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಅವರ ತಂತ್ರಕ್ಕೆ ನಾವು ಪ್ರತಿತಂತ್ರವನ್ನು ಮಾಡುತ್ತಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೇ ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದು, 500 ಜನ ನನ್ನ ಆಸ್ತಿ ಪತ್ರವನ್ನು ಡೌನ್‌ಲೋಡ್‌ ಮಾಡಿದ್ದಾರೆ. ಬಿಜೆಪಿಯವರು ನನ್ನ ನಾಮಪತ್ರ ರಿಜೆಕ್ಟ್‌ ಆಗುವ ಹಾಗೆ ತಂತ್ರವನ್ನು ರೂಪಿಸಿರಬಹುದು. ಅಲ್ಲದೇ ಡಿಕೆಶಿ ಸುಳ್ಳು ಆಸ್ತಿ ವಿವರ ಕೊಟ್ಟಿದ್ದಾರೆ ಎಂದು ಬಿಜೆಪಿ ದೂರು ನೀಡುವ ಸಾಧ್ಯತೆ ಇದೆ. ಹಾಗಾಗಿ ನಾವು ಪತ್ರಿತಂತ್ರವನ್ನು ಹೂಡಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ ಮ್ಯಾಜಿಕ್‌: ಈ ಬಾರಿ ಜೆಡಿಎಸ್‌ಗೆ ಹಬ್ಬವೋ ಹಬ್ಬ !

Related Video