Lok Sabha elections 2024: 14 ಲೋಕಸಭಾ ಕ್ಷೇತ್ರದಲ್ಲಿನ ಮತದಾನ ಅಂತ್ಯ, ಮತಯಂತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ಭದ್ರ!
ಕರ್ನಾಟಕದ 14 ಕ್ಷೇತ್ರಗಳಲ್ಲೂ ಸಹ ಶಾಂತಿಯುತವಾಗಿ ಮತದಾನ ನಡೆದಿದ್ದು, ರಾಜ್ಯದಲ್ಲಿ ಒಟ್ಟು ಶೇಕಡಾ 69 ರಷ್ಟು ಮತದಾನ ನಡೆದಿದೆ. ಈ ನಡುವೆ ಸ್ಟ್ರಾಂಗ್ ರೂಮ್‌ಗಳಲ್ಲಿ ಮತದಾರನ ನಿರ್ಧಾರ ಭದ್ರವಾಗಿದ್ದು, ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳು ನಿರಾಳರಾಗಿದ್ದಾರೆ.
ಲೋಕಸಭಾ ಚುನಾವಣೆ 2024 (Lok Sabha Elections 2024) ಹಿನ್ನೆಲೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ(Voting) ಅಂತ್ಯವಾಗಿದ್ದು, 247 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಈ ಮೂಲಕ ಮೊದಲ ಹಂತದ ಕರ್ನಾಟಕ(Karnataka) ಮತಯುದ್ಧಕ್ಕೆ ತೆರೆ ಎಳೆಯಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ 14 ಕ್ಷೇತ್ರಗಳಲ್ಲೂ ಸಹ ಶಾಂತಿಯುತವಾಗಿ ಮತದಾನ ನಡೆದಿದೆ. ಹಾಗೆಯೇ ರಾಜ್ಯದಲ್ಲಿ ಒಟ್ಟು ಶೇಕಡಾ 69 ರಷ್ಟು ಮತದಾನ ನಡೆದಿದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿ ಮತದಾರನ ನಿರ್ಧಾರ ಭದ್ರವಾಗಿದೆ. ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳು ನಿರಾಳರಾಗಿದ್ದು, ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಲ್ಲದೆ ಬೂತ್ ಏಜೆಂಟ್‌ಗಳ ಮೂಲಕ ಮತದಾನದ ಮಾಹಿತಿ ಸಂಗ್ರಹಣೆ ಸಹ ಮಾಡಲಾಗುತ್ತಿದೆ. ಹಾಗೆಯೇ 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಯವರೆಗೆ ಶೇಕಡಾ 69ರಷ್ಟು ಮತದಾನ ಆಗಿದ್ದು, 201 9ರಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ ಶೇ.70.4ರಷ್ಟು ಮತದಾನ ಆಗಿತ್ತು. ಮೇ7ಕ್ಕೆ 2ನೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ಕ್ಕೆ ಫಲಿತಾಂಶ ಹೊರಬೀಳಲಿದೆ.
ಇದನ್ನೂ ವೀಕ್ಷಿಸಿ: Narendra Modi: ಕರುನಾಡಲ್ಲಿ 2ನೇ ಹಂತದಲ್ಲಿ ಮೋದಿ ಕ್ಯಾಂಪೇನ್ ಕಿಕ್: ಇಂದು ಕುಂದಾನಗರಿಗೆ ಪ್ರಧಾನಿ ಮೋದಿ ಗ್ರ್ಯಾಂಡ್ ಎಂಟ್ರಿ